ಕರ್ನಾಟಕ

karnataka

ETV Bharat / state

ಕಾರ್ಪೊರೇಟರ್ ನಟರಾಜ್ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿಗಳು ದೋಷಮುಕ್ತ - ಸಿಟಿ ಸಿವಿಲ್ ನ್ಯಾಯಾಲಯ

ಕಾರ್ಪೊರೇಟರ್ ನಟರಾಜ್ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ಆರೋಪಿಗಳನ್ನು ದೋಷಮುಕ್ತ ಎಂದು ಘೋಷಿಸಿ ಸಿಟಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ಸಿಟಿ ಸಿವಿಲ್ ಕೋರ್ಟ್
ಸಿಟಿ ಸಿವಿಲ್ ಕೋರ್ಟ್

By

Published : Apr 12, 2023, 9:30 PM IST

ವೇಣುಗೋಪಾಲ್ ಕುಲಕರ್ಣಿ

ಬೆಂಗಳೂರು : ಹನ್ನೊಂದು ವರ್ಷಗಳ ಹಿಂದೆ ಗಾಂಧಿನಗರ ವಾರ್ಡ್ ಕಾರ್ಪೋರೇಟರ್ ಆಗಿದ್ದ ಎಸ್.ನಟರಾಜ್ ಕೊಲೆ ಪ್ರಕರಣ ಸಂಬಂಧ ಶೇಷಾದ್ರಿಪುರಂ ಪೊಲೀಸರಿಂದ ಬಂಧಿತರಾಗಿದ್ದ ಪ್ರಮುಖ ಆರೋಪಿ ಮುರುಗನ್ ಸೇರಿ 11 ಮಂದಿ ಆರೋಪಿಗಳನ್ನು ದೋಷಮುಕ್ತಿಗೊಳಿಸಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ನಟರಾಜ್ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಸರ್ಕಾರಿ ಅಭಿಯೋಜಕರು ಆರೋಪಿಗಳ ವಿರುದ್ಧ ಸಲ್ಲಿಸಿದ್ದ ಆರೋಪಗಳು ಸಾಬೀತಾಗದ ಕಾರಣ ಸಿಟಿ ಸಿವಿಲ್ ನ್ಯಾಯಾಲಯದ 60ನೇ ಹೆಚ್ಚುವರಿ ನ್ಯಾಯಾಧೀಶ ಸದಾನಂದ ನಾಯಕ್ ಆರೋಪಿಗಳನ್ನು ಆರೋಪಮುಕ್ತಗೊಳಿಸಿದ್ದಾರೆ. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ಕಾಲದಲ್ಲಿ ಆರೋಪಿಗಳ ವಿರುದ್ಧ ಸಲ್ಲಿಸಲಾಗಿದ್ದ ಸಾಂದರ್ಭಿಕ ಹಾಗೂ ಪ್ರತ್ಯಕ್ಷ ಸಾಕ್ಷಿ ಸೇರಿದಂತೆ ಎಲ್ಲಾ ರೀತಿಯ ವಿಟ್ನೆಸ್​ಗಳನ್ನು ಒದಗಿಸಿದ್ದರೂ ಆರೋಪಿಗಳೇ ಕೊಲೆ ಎಸಗಿರುವ ಬಗ್ಗೆ ಖಚಿತತೆ ಇಲ್ಲದ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಶಿಕ್ಷೆಯಿಂದ ಖುಲಾಸೆಗೊಳಿಸಿದೆ.

ಪ್ರಕರಣ ಹಿನ್ನೆಲೆ: ಅಕ್ಟೋಬರ್ 1 ರಂದು ಮಲ್ಲೇಶ್ವರ ರಸ್ತೆಯ ಸಂಪಿಗೆ ಚಿತ್ರಮಂದಿರ ಬಳಿ ದ್ವಿಚಕ್ರವಾಹನದಲ್ಲಿ ನಟರಾಜ್ ಹೋಗುತ್ತಿದ್ದಾಗ ಮಾರುತಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆ ಹಾಗೂ ಕುತ್ತಿಗೆಗೆ ಬರ್ಬರವಾಗಿ ಹೊಡೆದು ಹತ್ಯೆ ಮಾಡಿದ್ದರು. ಈ ಬಗ್ಗೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲರಾದ ವೇಣುಗೋಪಾಲ್ ಕುಲಕರ್ಣಿ ಅವರು ಮಾತನಾಡಿ, "ಇವತ್ತು ನಡೆದಂತಹ ಕೇಸ್​ನಲ್ಲಿ 2011ರಲ್ಲಿ ಕಾರ್ಪೋರೇಟರ್ ಎಸ್ ನಟರಾಜ್ ಅವರ ಕೊಲೆಯನ್ನು ಮುರುಗನ್ ಸೇರಿದಂತೆ ಹನ್ನೊಂದು ಆರೋಪಿಗಳು ಎಸಗಿದ್ದಾರೆ ಎಂಬ ಗುಮಾನಿ ಮೇರೆಗೆ ಶೇಷಾದ್ರಿಪುರಂ ಪೊಲೀಸರು ಅರೆಸ್ಟ್​ ಮಾಡಿದ್ದರು. 2011ರಿಂದ ಇಲ್ಲಿಯವರೆಗೆ ನಡೆದ ಕೇಸ್​ನಲ್ಲಿ ಪ್ರಾಸಿಕ್ಯೂಷನ್ ನೀಡಿದ ಎಲ್ಲಾ ಸಾಕ್ಷ್ಯಾಧಾರಗಳು ಆರೋಪಿಗಳೆಂದು ಸಾಬೀತುಪಡಿಸಲು ಸಾಧ್ಯವಾಗದಿದ್ದರಿಂದ ಸಿಟಿ ಸಿವಿಲ್ ನ್ಯಾಯಾಲಯದ ಆರೋಪಿಗಳನ್ನು ಭೇಷರತ್​ ಆಗಿ ನಿರಪರಾಧಿಗಳೆಂದು ಘೋಷಿಸಿ ಬಿಡುಗಡೆ ಮಾಡಿದ್ದಾರೆ" ಎಂದಿದ್ದಾರೆ.

ಕಾರ್ಪೋರೇಟರ್ ನಟರಾಜ್

ಇದನ್ನೂ ಓದಿ:ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಗಲಭೆ: ಆರೋಪಿಗಳ ವಿರುದ್ಧದ ಆದೇಶ ರದ್ದತಿಗೆ ಹೈಕೋರ್ಟ್ ನಿರಾಕರಣೆ

"ಪ್ರಾಸಿಕ್ಯೂಷನ್ ಕೊಟ್ಟಂತಹ ಯಾವುದೇ ಸಾಕ್ಷಿಗಳು ಕೋರ್ಟ್​ ಮುಂದೆ ಸರಿಯಾಗಿ ಸಾಬೀತಾಗದೆ ಇದ್ದಿದ್ದರಿಂದ ಹಾಗೂ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ತರುವಾಯ ಯಾವುದೇ ದೋಷಗಳು ಕಂಡುಬರದೆ ಇದ್ದುದರಿಂದ ದೋಷಮುಕ್ತವಾಗಿ 11 ಜನ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಣೆ ಮಾಡಿ ಭೇಷರತ್ ಆಗಿ ಬಿಡುಗಡೆ ಮಾಡಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕೆಪಿಎಸ್​​ಸಿ ಅಧ್ಯಕ್ಷ, ಸದಸ್ಯರ ನೇಮಕ ರದ್ದು ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ABOUT THE AUTHOR

...view details