ಕರ್ನಾಟಕ

karnataka

ETV Bharat / state

ಬಿಎಸ್ಎಫ್ ಕ್ಯಾಂಪಸ್​​ಗೆ ಕೊರೊನಾ ವೈರಸ್ ಶಂಕಿತ ರೋಗಿಗಳು? ಕರವೇ ಪ್ರತಿಭಟನೆ - ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು

ಚೀನಾದಿಂದ 300 ಜನ ಕೊರೊನಾ ವೈರಸ್ ಸೋಂಕಿತ ರೋಗಿಗಳನ್ನು ಕರೆಯಲಾಗುತ್ತಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಏರ್‌ಪೋರ್ಟ್ ಸರ್ವೀಸ್ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಬಿಎಸ್ಎಫ್ ಗೇಟ್ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

BSF campus
ಬಿಎಸ್ಎಫ್ ಕ್ಯಾಂಪಸ್​​ಗೆ ಕೊರೊನಾ ವೈರಸ್ ಶಂಕಿತ ರೋಗಿಗಳು

By

Published : Feb 12, 2020, 4:47 PM IST

Updated : Feb 13, 2020, 12:00 AM IST

ಬೆಂಗಳೂರು: ನಗರದ ಏರ್‌ಪೋರ್ಟ್ ರಸ್ತೆಯ ಬಿಎಸ್ಎಫ್ ಕ್ಯಾಂಪಸ್​​​ಗೆ ಚೀನಾದಿಂದ 300 ಜನ ಕೊರೊನಾ ವೈರಸ್ ಸೋಂಕಿತರನ್ನು ಕರೆಯಲಾಗುತ್ತಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಏರ್‌ಪೋರ್ಟ್ ಸರ್ವೀಸ್ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸುರೇಶ್​​ ನೇತೃತ್ವದಲ್ಲಿ ಬಿಎಸ್ಎಫ್ ಗೇಟ್ ಮುಂಭಾಗದಲ್ಲಿ ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಕೊರೊನಾ ವೈರಸ್ ಸೋಂಕಿತರನ್ನ ಕರೆತಂದು ಇಲ್ಲಿ ಚಿಕಿತ್ಸೆ ನೀಡಲು ಅವಕಾಶ ಕೊಡಬಾರದು ಎಂದು ರಸ್ತೆಗಿಳಿದ ಪ್ರತಿಭಟನಾಕಾರರು ವಾಹನಗಳನ್ನು ತಡೆದು ಆರೋಗ್ಯ ಸಚಿವರು ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದರು.

ಬಿಎಸ್ಎಫ್ ಕ್ಯಾಂಪಸ್​​ಗೆ ಕೊರೊನಾ ವೈರಸ್ ಶಂಕಿತ ರೋಗಿಗಳು

ಈ ವೇಳೆ ಮಾತನಾಡಿದ ಕರವೇ ಬೆಂ.ನ.ಜಿ. ಅಧ್ಯಕ್ಷ ಸುರೇಶ್, ಚೀನಾದಿಂದ ಭಾರತ ಮೂಲದ ಕೊರೊನಾ ವೈರಸ್ ಸೋಂಕಿತರನ್ನು ಕರೆತಂದು ಚಿಕಿತ್ಸೆ ನೀಡಲು ಮುಂದಾಗಿರುವ, ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಇಲ್ಲಿ 300 ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ರಾತ್ರಿ ಅಥವಾ ನಾಳೆಯೊಳಗೆ ಇಲ್ಲಿಗೆ ಕರೆತರುತ್ತಾರೆಂಬ ಖಚಿತ ಮಾಹಿತಿ ಬಂದಿದೆ. ಇದು ಅಧಿಕ ಜನಸಾಂದ್ರತೆ ಹೊಂದಿರುವ ಪ್ರದೇಶ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶಗಳು ಇವೆ. ಇಲ್ಲಿ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು. ನೀಡುವುದಿದ್ದರೆ ಹೊರವಲಯದಲ್ಲಿ ಇಟ್ಟು ಚಿಕಿತ್ಸೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್ಎಫ್ ಕ್ಯಾಂಪಸ್​ನಲ್ಲಿ ಯಾವುದೇ ಕಾರಣಕ್ಕೂ ಸೋಂಕಿತರನ್ನ ಕರೆತಂದು ಚಿಕಿತ್ಸೆ ನೀಡಲು ಬಿಡುವುದಿಲ್ಲ. ಒಂದುವೇಳೆ ಕರೆತಂದಿದ್ದೇ ಆದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Last Updated : Feb 13, 2020, 12:00 AM IST

ABOUT THE AUTHOR

...view details