ಬೆಂಗಳೂರು :ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿಧಾನಸೌಧದ 3ನೇ ಮಹಡಿಯ ಸಚಿವ ಸುಧಾಕರ್ ಕಚೇರಿಯ 339ನೇ ಕೊಠಡಿಯನ್ನು ಸೀಲ್ಡೌನ್ ಮಾಡಲಾಗಿದೆ.
ಸಚಿವ ಡಾ ಕೆ ಸುಧಾಕರ್ ಆಪ್ತ ಸಹಾಯಕನಿಗೆ ಕೊರೊನಾ.. ವಿಧಾನಸೌಧದ 3ನೇ ಮಹಡಿಯ ಕಚೇರಿ ಸೀಲ್ಡೌನ್.. - Bangalore
ಈ ಹಿಂದೆ ಸಚಿವ ಸುಧಾಕರ್ ತಂದೆ, ಪತ್ನಿ, ಮಗಳು ಸೇರಿ ಕುಟುಂಬದ ಸದಸ್ಯರಿಗೆ ಪಾಸಿಟಿವ್ ಬಂದ ಹಿನ್ನೆಲೆ ಕ್ವಾರಂಟೈನ್ ಆಗಿದ್ದರು. ಬಳಿಕ ಆಪ್ತ ವಲಯದಲ್ಲಿನ ವ್ಯಕ್ತಿಗೆ ಸೋಂಕು ತಗುಲಿದಾಗಲೂ 2ನೇ ಬಾರಿ ಕ್ವಾರಂಟೈನ್ ಆಗಿದ್ದರು..
ವಿಧಾನಸೌಧ ಕಚೇರಿ ಸೀಲ್ಡೌನ್
ಆಪ್ತ ಸಿಬ್ಬಂದಿ ಶಾಖೆ ಇದ್ದ 336-ಎ ಕೊಠಡಿಯನ್ನೂ ಸೀಲ್ಡೌನ್ ಮಾಡಲಾಗಿದೆ. ಈ ಹಿಂದೆ ಸುಧಾಕರ್ ತಂದೆ, ಪತ್ನಿ, ಮಗಳು ಸೇರಿ ಕುಟುಂಬದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಡಾ.ಕೆ.ಸುಧಾಕರ್ ಕ್ವಾರಂಟೈನ್ ಆಗಿದ್ದರು. ಬಳಿಕ ಆಪ್ತ ವಲಯದಲ್ಲಿನ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ 2ನೇ ಬಾರಿ ಕ್ವಾರಂಟೈನ್ ಆಗಿದ್ದರು.
ಇದೀಗ ಅವರ ಕಚೇರಿಯಲ್ಲಿನ ಆಪ್ತ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಮತ್ತೆ ಡಾ.ಸುಧಾಕರ್ಗೆ ಕ್ವಾರಂಟೈನ್ ಆಗುವ ಭೀತಿ ಎದುರಾಗಿದೆ.