ಕರ್ನಾಟಕ

karnataka

ETV Bharat / state

ಕೊರೊನಾ ಉಸ್ತುವಾರಿ ವಿಚಾರ: ಇಬ್ಬರು ಸಚಿವರ ನಡುವೆ ಇದೆಯಾ ಅಸಮಾಧಾನ..? - ಕಂದಾಯ ಸಚಿವ ಆರ್. ಅಶೋಕ್

ಸಚಿವ ಅಶೋಕ್ ಹೇಳಿಕೆ ನೀಡಿದ ನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ, ಇಷ್ಟು ದಿನದ ಅವಕಾಶಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

Corona Management In charge
ಕೊರೊನಾ ಉಸ್ತುವಾರಿ ವಿಚಾರ

By

Published : Jun 26, 2020, 11:02 PM IST

ಬೆಂಗಳೂರು: ಕೊರೊನಾ ನಿರ್ವಹಣಾ ಉಸ್ತುವಾರಿ ವಿಚಾರ ಸಂಬಂಧ ನಮ್ಮಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮದು ಮೂರು ದೇಹ ಒಂದೇ ಮನಸ್ಸು ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಅಶೋಕ್ ಅವರಿಗೆ ಕೋವಿಡ್ ಉಸ್ತುವಾರಿ ನೀಡಿರುವುದಕ್ಕೆ ಇಬ್ಬರು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವ ಆರೋಪ ಕುರಿತು, ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆ ರೀತಿಯ ಸಂಸ್ಕ್ರತಿ ನಮ್ಮಲ್ಲಿ ಇಲ್ಲ, ಅದು ಕಾಂಗ್ರೆಸ್ ಸಂಸ್ಕೃತಿ, ನಾಳೆ ನಮ್ಮ ಕೆಂಪೇಗೌಡ ಪ್ರತಿಮೆ ಕಾರ್ಯಕ್ರಮವಿದೆ. ಎಲ್ಲರೂ ಒಟ್ಟಿಗೆ ಹೋಗುತ್ತೇವೆ, ನಾನು ಕೂಡ ಅವರ ಜೊತೆಗೆ ಕೆಲಸ ಮಾಡುತ್ತೇನೆ. ಯಾವುದೇ ರೀತಿಯಲ್ಲಿ ವ್ಯತ್ಯಾಸ ಬರದ ರೀತಿಯಲ್ಲಿ ಕೆಲಸ ಮಾಡುತ್ತೇವೆ ನಮ್ಮದು ಮೂರು ದೇಹ ಒಂದೇ ಮನಸ್ಸು ಎಂದರು.

ಕಂದಾಯ ಸಚಿವ ಆರ್. ಅಶೋಕ್

ಸಚಿವ ಅಶೋಕ್ ಹೇಳಿಕೆ ನೀಡಿದ ನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ, ಇಷ್ಟು ದಿನದ ಅವಕಾಶಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಬೆಂಗಳೂರು ನಗರದ ಕೋವಿಡ್ ಉಸ್ತುವಾರಿಯಾಗಿ, ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ ಎಂದು ತಿಳಿಸಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ತಂಡದಲ್ಲಿ ದೇಶವೇ ಮೆಚ್ಚುವಂತೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ ತೃಪ್ತಿ, ಹೆಮ್ಮೆಯಿದೆ. ನಿಮ್ಮ ಹಾರೈಕೆಗೆ ಧನ್ಯವಾದಗಳು ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಇದರ ಹಿಂದಿನ ಮರ್ಮವೇನು ಎನ್ನುವುದು ಮಾತ್ರ ನಿಗೂಢ.

ABOUT THE AUTHOR

...view details