ಬೆಂಗಳೂರು :ಭೂಗತ ಪಾತಕಿ ರವಿ ಪೂಜಾರಿ ತನಿಖೆಯನ್ನು ಸಿಸಿಬಿ ತಂಡ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನಡೆದ ಹಲವಾರು ಪ್ರಕರಣದ ಕುರಿತು ವಿಚಾರಣೆಗೆ ಒಳಪಡಿಸಿದ್ದಾರೆ.
ರವಿ ಪೂಜಾರಿ ವಿಚಾರಣೆ ಮೇಲೂ ಕೊರೊನಾ ಎಫೆಕ್ಟ್ - ಪೊಲೀಸರಿಗೂ ತಟ್ಟಿದ ಕೊರೊನಾ ಭೀತಿ
ಎಲ್ಲ ಕಡೆ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಭೂಗತ ಪಾತಕಿ ರವಿ ಪೂಜಾರಿ ತನಿಖೆ ನಡೆಸುತ್ತಿರುವ ಪೊಲೀಸರು ಕೊರೊನಾ ಭಯದಿಂದ ಮಾಸ್ಕ್ ಧರಿಸಿ, ರವಿ ಪೂಜಾರಿಗೂ ಮಾಸ್ಕ್ ಹಾಕಿಸಿ ತನಿಖೆ ನಡೆಸುತ್ತಿದ್ದಾರೆ.
ಎಲ್ಲೆಡೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪೊಲೀಸರು ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾಗೆಯೇ ರವಿ ಪೂಜಾರಿಗೂ ಮಾಸ್ಕ್ ,ಗ್ಲೌಸ್ ನೀಡಿದ್ದಾರೆ. ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆತನಿಗೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಲು ಅವಕಾಶ ನೀಡಿದ್ದು, ವಿಚಾರಣೆ ನಡೆಸುವ ಅಧಿಕಾರಿಗಳಿಗೆ ಬಿಟ್ಟು ಯಾರಿಗೂ ಭೇಟಿ ಮಾಡುವ ಅವಕಾಶ ನೀಡಿಲ್ಲ.
ಈಗಾಗಲೇ ರವಿ ಪೂಜಾರಿಗೆ ಆರೋಗ್ಯ ಸಮಸ್ಯೆಯಿರುವ ಕಾರಣ ನಿತ್ಯ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಕ್ರಿಮಿನಾಶಕ ಸಿಂಪಡಿಸಿ ಮಡಿವಾಳದ ವಿಚಾರಣಾ ರೂಂನಲ್ಲಿ ನಗರದ ಪ್ರಮುಖ ವಿಚಾರಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.