ಕರ್ನಾಟಕ

karnataka

By

Published : Mar 13, 2020, 2:34 PM IST

ETV Bharat / state

ಕೊರೊನಾ ಎಫೆಕ್ಟ್: ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ರದ್ದು...!

ಮಹಾಮಾರಿ ಕೊರೊನಾವನ್ನ ಆರೋಗ್ಯ ತುರ್ತುಪರಿಸ್ಥಿತಿ ಎನ್ನುವಂತೆ ಪರಿಗಣಿಸಲಾಗಿದ್ದು, ಆರೋಗ್ಯ ಇಲಾಖೆ ತನ್ನ ಇಲಾಖಾ ಸಿಬ್ಬಂದಿಯ ರಜೆಯನ್ನು ರದ್ದುಪಡಿಸಿದೆ.

Corona Effect
ಕೊರೊನಾ ಎಫೆಕ್ಟ್: ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ರದ್ದು

ಬೆಂಗಳೂರು: ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ‌ ಸಜ್ಜಾಗುತ್ತಿರುವ ಆರೋಗ್ಯ ಇಲಾಖೆ ತನ್ನ ಇಲಾಖಾ ಸಿಬ್ಬಂದಿ ರಜೆ ರದ್ದುಪಡಿಸಿದೆ.

ಆರೋಗ್ಯ ತುರ್ತುಪರಿಸ್ಥಿತಿ ಎನ್ನುವಂತೆ ಕೊರೊನಾ ಭೀತಿಯನ್ನು ಪರಿಗಣಿಸಲಾಗಿದ್ದು, ಎಲ್ಲ ರೀತಿಯಲ್ಲೂ ಆರೋಗ್ಯ ಇಲಾಖೆ ಸಿದ್ದಗೊಳ್ಳುತ್ತಿದ್ದು, ಅಗತ್ಯ ಚಿಕಿತ್ಸೆ, ತಪಾಸಣೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಿರಲು ಸಿಬ್ಬಂದಿ ಕೊರತೆಯಾಗದಂತೆ ಮುನ್ನೆಚ್ಚರಿಕೆವಹಿಸಲು ಇಲಾಖೆ ಈ ಮುನ್ನೆಚ್ಚರಿಕೆ ಕೈಗೊಂಡಿದೆ.

ರಾಜ್ಯದ ಎಲ್ಲ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿಗೆ ಶನಿವಾರ, ಭಾನುವಾರ ರಜೆ ರದ್ದುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ‌ ಹೊರಡಿಸಿದೆ.

ABOUT THE AUTHOR

...view details