ಬೆಂಗಳೂರು : ರಾಜ್ಯದಲ್ಲಿಂದು 16,551 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 48 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,359ಕ್ಕೆ ಏರಿಕೆ ಆಗಿದೆ. ಪಾಸಿಟಿವಿಟಿ ದರವು 0.29% ರಷ್ಟಿದೆ. ಇತ್ತ 105 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,03,547 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
1719 ಸದ್ಯ ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಒಬ್ಬ ಸೋಂಕಿತ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,051 ಏರಿಕೆ ಕಂಡಿದೆ. ಡೆತ್ ರೇಟ್ 2.08% ರಷ್ಟಿದೆ. ವಿಮಾನ ನಿಲ್ದಾಣದಿಂದ 3,086 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 40 ಮಂದಿಗೆ ಸೋಂಕು ತಗುಲಿದ್ದು 17,81,512 ಕ್ಕೆ ಏರಿಕೆ ಆಗಿದೆ. 82 ಮಂದಿ ಗುಣಮುಖರಾಗಿದ್ದು, ಈವರೆಗೆ 17,63,031 ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಾವಿನ ಸಂಖ್ಯೆ 16,959ರಷ್ಟಿದ್ದು, 1,539 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ವೈರಸ್ ಅಪ್ಡೇಟ್ಸ್ :
ಅಲ್ಪಾ- 156
ಬೇಟಾ-08
ಡೆಲ್ಟಾ ಸಬ್ ಲೈನೇಜ್- 4,620