ಬೆಂಗಳೂರು:ರಾಜ್ಯದಲ್ಲಿಂದು 1,837 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಸೋಂಕಿತರು ಸಾವಿಗೀಡಾಗಿದ್ದಾರೆ. 29,425 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 1,290 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಒಟ್ಟು 11,898 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.6.24 ಇದೆ. ವಾರದ ಸೋಂಕಿತರ ಪ್ರಮಾಣ ಶೇ.6.50 ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.10 ಇದೆ.
ರಾಜ್ಯದಲ್ಲಿಂದು 1,837 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ: ನಾಲ್ವರು ಸಾವು - ಕೋವಿಡ್
ರಾಜ್ಯದಲ್ಲಿ ಭಾನುವಾರ 1,837 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. 1,290 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ.
ಕೊರೊನಾ
ಬೆಂಗಳೂರಿನಲ್ಲಿ ಇಂದು 1,137 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,44,811 ಕ್ಕೆ ಏರಿಕೆ ಆಗಿದೆ. ಇಂದು 949 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಲ್ಲಿ ಈವರೆಗೂ ಕೋವಿಡ್ ಸಾವಿನ ಸಂಖ್ಯೆ 16,977 ಆಗಿದೆ. ರಾಜಧಾನಿಯಲ್ಲಿ 8,283 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ:ಹರ್ ಘರ್ ತಿರಂಗಾ ಅಭಿಯಾನ: ಕಿಚ್ಚ ಸುದೀಪ್ಗೆ ಧ್ವಜ ನೀಡಿ ಬೆಂಬಲ ಕೋರಿದ ಬಿಜೆಪಿ