ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿ 49 ವರ್ಷದ ಮಹಿಳೆಗೆ (ಪಿ-701) ಕೊರೊನಾ ಸೋಂಕು ತಗುಲಿರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಮಹಿಳೆ ಚಿಕುನ್ ಗುನ್ಯಾ ಚಿಕಿತ್ಸೆಗೆಂದು ದಾಖಲಾಗಿದ್ದ ಯಶವಂತಪುರದಲ್ಲಿರುವ ಮಂಗಲ್ಸ್ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಯಶವಂತಪುರದಲ್ಲಿರುವ ಮಂಗಲ್ಸ್ ಆಸ್ಪತ್ರೆ ಸೀಲ್‌ಡೌನ್.. ಓದಿ: ಚಿಕುನ್ ಗುನ್ಯಾ ಚಿಕಿತ್ಸೆಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್
ಮಹಿಳೆಯ ಮಗ, ಸೊಸೆ ಹಾಗೂ ಆಸ್ಪತ್ರೆಯ 15 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮಗನ ಮನೆಗೆ ಎರಡು ತಿಂಗಳ ಹಿಂದೆ (ಮಾರ್ಚ್ 12) ಪಶ್ಚಿಮ ಬಂಗಾಳದಿಂದ ಈ ಮಹಿಳೆ ಬಂದಿದ್ದರು. ಆದರೆ, ಕೊರೊನಾ ಯಾರಿಂದ, ಹೇಗೆ ತಗುಲಿದೆ ಎಂಬುದೇ ನಿಗೂಢವಾಗಿದೆ.
ಪಾಲಿಕೆ ಅಧಿಕಾರಿಗಳು ಅವರ ಪ್ರಯಾಣದ ಇತಿಹಾಸ, ಅವರು ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಅವರು ವಾಸವಿದ್ದ ಮನೆಯ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ನೈರ್ಮಲ್ಯೀಕರಣ ಮಾಡಲಾಗಿದೆ.