ಕರ್ನಾಟಕ

karnataka

ETV Bharat / state

ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಹರಿಪ್ರಸಾದ್ - ಕರ್ನಾಟಕ ಚುನಾವಣೆ 2023

ಪ್ರಜಾಪ್ರಭುತ್ವದ ಹಬ್ಬಕ್ಕೆ ತಾರೀಖು ನಿಗದಿಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.

congress-will-come-to-power-with-clear-majority-hariprasad
ಬಹಳ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಹರಿಪ್ರಸಾದ್

By

Published : Mar 29, 2023, 3:34 PM IST

ಬೆಂಗಳೂರು:ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬಿಜೆಪಿ ಬಹಳ ನಿರೀಕ್ಷೆ ಇಟ್ಟಿಕೊಂಡಿತ್ತು. ಆದರೆ ಬಹಳ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಇವಿಎಂ, ಇಡಿ, ಸಿಬಿಐ, ಐಟಿ ದುರ್ಬಳಕೆ ಆಗಬಾರದು. ಇದನ್ನು ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ತಾರೀಖು ನಿಗದಿಯಾಗಿದೆ. ಮೇ 10 ಚುನಾವಣೆ ದಿನಾಂಕ ನಿಗದಿಯಾಗಿದೆ. ಮತ ಎಣಿಕೆಗೆ ಬಹಳ ಅಂತರ ಕೊಡದೇ ಒಂದೇ ಹಂತದಲ್ಲಿ ಮಾಡುವುದು ಒಳ್ಳೆಯ ನಿರ್ಣಯ. ಈ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹಳಷ್ಟು ಅನುಕೂಲವಾಗಲಿದೆ. ಚಿಲುಮೆ ವೋಟಿಂಗ್ ಲಿಸ್ಟ್​​ನಲ್ಲಿ ಹೆಚ್ಚೂ ಕಡಿಮೆ ಆಗುವುದು ನೋಡ್ತಾ ಇದ್ದೇವೆ. ಬಿಜೆಪಿಯವರು ಹೆಚ್ಚಿ‌ನ ಅಂಶ ವೋಟರ್ ಡಿಲೀಟ್ ಮಾಡಿಸಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಅನ್ನು ಬುಡ ಸಮೇತ ಕಿತ್ತು ಹಾಕ್ತೀವಿ ಅಂತ ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಅಶೋಕ್ ತಮ್ಮ ಬುಡ ಗಟ್ಟಿ ಇದೆಯಾ ನೋಡಿಕೊಳ್ಳಲಿ. ಬಿಜೆಪಿಯವರಿಗೆ ಹಸು ಮೇಯಿಸೋಕೆ ಹುಲ್ಲು ಸಿಗದಂತಾಗಿದೆ ಎಂದು ಹೇಳಿದರು.

ಭರವಸೆ ಈಡೇರಿಸದೇ ಇದ್ದರೇ ರಾಜಕೀಯ ನಿವೃತ್ತಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕರ್ನಾಟಕ ಐದು ವರ್ಷ ಹಿಂದೆ ಹೋಗಿದೆ. ಅದನ್ನು ಮತ್ತೆ ಸರಿ ಮಾಡಬೇಕು ಅಂದರೆ ಕಾಂಗ್ರೆಸ್ ಆಡಳಿತಕ್ಕೆ ಬರಬೇಕು. ಕರ್ನಾಟಕ ಶಾಂತಿಯುತ ರಾಜ್ಯ, ಒಂದೇ ಹಂತದಲ್ಲಿ ಚುನಾವಣೆ ನಡೆಯುವುದು ಸೂಕ್ತ. ನಮ್ಮ ನಾಲ್ಕು ಗ್ಯಾರಂಟಿ ಕಾರ್ಡ್​ಗಳನ್ನು ನಾವು ಈಡೇರಿಸುತ್ತೇವೆ. ಒಂದಾದರೂ ಭರವಸೆ ಈಡೇರಿಸದೇ ಇದ್ದರೆ ನಾವು ರಾಜಕೀಯ ನಿವೃತ್ತಿ ತೆಗೆದುಕೊಳ್ತೇವೆ. ಬಿಜೆಪಿಯವರು ಭಯದಲ್ಲಿ ಇದ್ದಾರೆ ನಡುಕ ಹುಟ್ಟಿದೆ. ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮಾತಲ್ಲಿ ಹುರುಳಿಲ್ಲ. ಸುಳ್ಳಿನ ವಾಟ್ಸಪ್ ಫ್ಯಾಕ್ಟರಿಗಳಲ್ಲಿ ಹರಿಬಿಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಚುನಾವಣಾ ಆಯೋಗದ ಮೇಲೂ ಅನುಮಾನ-ಖಂಡ್ರೆ: ರಾಜ್ಯದ ಜನತೆ ಬಹುನಿರೀಕ್ಷಿತ ದಿನಾಂಕದ ಬಗ್ಗೆ ಕಾಯ್ತಾ ಇದ್ರು. ದಿನಾಂಕ ಘೋಷಣೆ ಸ್ವಾಗತ ಮಾಡ್ತಾ ಇದ್ದೇನೆ. ಇವತ್ತೇನು ಚುನಾವಣಾ ಆಯೋಗದ ಮೇಲೂ ಅನುಮಾನ ಇದೆ. ಬಿಜೆಪಿ ಪರ ಅನುಕೂಲ ಆಗುವ ಕೆಲಸ ಮಾಡುತ್ತಾರೆ ಎನ್ನುವ ಅನುಮಾನ ಇದೆ. ಚುನಾವಣೆ ನ್ಯಾಯ ಸಮ್ಮತವಾಗಿ ಆಗಬೇಕು ನಿಷ್ಪಕ್ಷಪಾತ ಚುನಾವಣೆ ನಡೆಯಬೇಕು. ಜನ ವಿರೋಧಿ ಭ್ರಷ್ಟ ಬಿಜೆಪಿಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಸರ್ವಾಧಿಕಾರಿ ಧೋರಣೆಯ ಬಿಜೆಪಿಯ ಕೊನೆ ಘಳಿಗೆ ಬಂದಿದೆ. ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸಲಹೆ ಇತ್ತರು.

ಬಿಜೆಪಿಯವರು ಕಾಂಗ್ರೆಸ್​ಗೆ ಸೇರ್ಪಡೆ ಆಗಲು ಸಾಲಿನಲ್ಲಿ ನಿಂತಿದ್ದಾರೆ- ಖಂಡ್ರೆ: ಸಿದ್ದರಾಮಯ್ಯ ಎರಡು ಕ್ಷೇತ್ರ ಆಯ್ಕೆ ವಿಚಾರ ಮಾತನಾಡಿ, ಸಿದ್ದರಾಮಯ್ಯ ಅಂದ್ರೆ ಬಿಜೆಪಿಯವರಿಗೆ ಭಯ. ಏನೇ ಹೇಳಿಕೆ ಕೊಟ್ಟರೂ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಗೆದ್ದೇ ಗೆಲ್ತಾರೆ. ಬಿಜೆಪಿಯವರು ಸುಳ್ಳಿನ ಭಯದಿಂದ ಅಪಪ್ರಚಾರ ಮಾಡ್ತಾರೆ ಎಂದು ಆರೋಪಿಸಿದರು. ಬಿಜೆಪಿಯವರು ಕಾಂಗ್ರೆಸ್ ಸೇರ್ಪಡೆ ಆಗಲು ಸಾಲಿನಲ್ಲಿ ನಿಂತಿದ್ದಾರೆ. ಸಿಎಂ ಹೇಳಿಕೆ ಇಡೀ ಬಿಜೆಪಿಯೇ ಕಿತ್ತುಕೊಂಡು ಹೋಗುತ್ತದೆ ಎಂಬ ಭಯದಿಂದ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೋಮಣ್ಣ ಅವಶ್ಯಕತೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸೋಮಣ್ಣ ಬರುವುದರಿಂದ ಕಾಂಗ್ರೆಸ್​ಗೆ ಏನೂ ಲಾಭವಿಲ್ಲ ಎಂದರು.

ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ

ABOUT THE AUTHOR

...view details