ಕರ್ನಾಟಕ

karnataka

ಅಫ್ಘಾನಿಸ್ತಾನಕ್ಕೆ ಶಾಸಕ ಯತ್ನಾಳ್​​​ ಗಡಿಪಾರು ಮಾಡುವಂತೆ ಒತ್ತಾಯ : ಸಿಎಂಗೆ ಕಾಂಗ್ರೆಸ್​ ಒತ್ತಾಯ

By

Published : Aug 24, 2021, 7:54 PM IST

Updated : Aug 24, 2021, 8:04 PM IST

ಎಐಸಿಸಿ ನಾಯಕ ರಾಹುಲ್​​ ಗಾಂಧಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್​ ನಿಯೋಗ ಇಂದು ಯತ್ನಾಳ್​ರನ್ನ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡುವಂತೆ ಸಿಎಂ ಬೊಮ್ಮಾಯಿಗೆ ಆಗ್ರಹಿಸಿದರು..

congress forced to exile Yatnal to Afghanistan
ಯತ್ನಾಳ್​​​ ಗಡಿಪಾರು

ಬೆಂಗಳೂರು :ಕಾಂಗ್ರೆಸ್ ನಾಯಕರ ವಿರುದ್ಧಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ರನ್ನು ಗಡಿಪಾರು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್​ ಮುಖಂಡ ಮನೋಹರ ನೇತೃತ್ವದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿಗೆ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದೆ.

ಮನವಿ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್, ಯತ್ನಾಳ್ ಹೇಳಿಕೆ ಒಪ್ಪುವಂತಿಲ್ಲ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಶಾಸಕ ಯತ್ನಾಳ್ ಬಳಸಿರುವ ಪದಗಳು ಖಂಡನೀಯ, ತಾಲಿಬಾನಿಗಳಿಗೆ ಸಂಬಂಧ ಕಲ್ಪಿಸಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಕೂಡಲೇ ಯತ್ನಾಳ್​ರನ್ನ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡುವಂತೆ ಮನವಿ ಮಾಡಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನೀವು ಯತ್ನಾಳ್​ ಸಂಬಂಧಿಕರಾ?:ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿ ಹೊರ ಬಂದ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಯತ್ನಾಳ್ ವಿರುದ್ಧ ಭಿತ್ತಿಪತ್ರ ಪ್ರದರ್ಶನಕ್ಕೆ ಮುಂದಾದರು.

ಯತ್ನಾಳ್ ರನ್ನ ಬಿನ್​ ಲಾಡೆನ್​ಗೆ ಹೋಲಿಸಿರುವ ಪೋಸ್ಟರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಭಿತ್ತಿಪತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಲು ಪೊಲೀಸರು ಮುಂದಾದಾಗ ಪೊಲೀಸರ ಮೇಲೆಯೇ ಗರಂ ಆದ ಕೈ ಕಾರ್ಯಕರ್ತರು ನೀವು ಏನು ಯತ್ನಾಳ್ ಅವರ ಸಂಬಂಧಿಕರಾ ಎಂದು ಕಿಡಿಕಾರಿದರು.

Last Updated : Aug 24, 2021, 8:04 PM IST

ABOUT THE AUTHOR

...view details