ಕರ್ನಾಟಕ

karnataka

ETV Bharat / state

ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ್‌ ಪೇ ಚರ್ಚಾ: ಕೈ ನಾಯಕರು ಭಾಗಿ

ಮೈತ್ರಿ ಸರ್ಕಾರದ ಪತನದ ಹಿನ್ನೆಲೆಯಲ್ಲಿ ಸಭೆ ಮೇಲೆ ಸಭೆ ನಡೆಸುತ್ತಿರುವ ಕೈ ನಾಯಕರು ಇಂದು ಕೂಡಾ ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನದ ಮೀಟಿಂಗ್ ನಡೆಸಿ ಪಕ್ಷದ ಮುಂದಿನ ಹೋರಾಟ ಮತ್ತು ನಿಲುವಿನ ಕುರಿತು ಚರ್ಚಿಸಿದರು.

ಕಾಂಗ್ರೇಸ್ ನಾಯಕರ ಸಭೆ

By

Published : Jul 30, 2019, 5:27 PM IST

ಬೆಂಗಳೂರು : ರಾಜ್ಯ ಮೈತ್ರಿ ಸರ್ಕಾರ ಪತನ ನಂತರ ಮುಂದೇನು ಎನ್ನುವ ವಿಚಾರವಾಗಿ ಕೈ ನಾಯಕರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇಂದು ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿ ಮತ್ತೆ ಮೀಟಿಂಗ್‌ ನಡೆಸಲಾಗಿದೆ.

ಮಾಜಿ ಸಚಿವ ಕೃಷ್ಣಭೈರೇಗೌಡ ನಿವಾಸದಲ್ಲಿ ನಡೆದ ಊಟದ ಸಭೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮ್ಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟದ ಬಳಿಕ ತೆರಳುತ್ತಿರುವ ಕೈ ನಾಯಕರು

ಮೈತ್ರಿ ಸರ್ಕಾರದಲ್ಲಿ ಸಹಕಾರ ನೀಡಿದ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ಭೋಜನಕೂಟವನ್ನು ಮಾಜಿ ಸಚಿವ ಕೃಷ್ಣಬೈರೇಗೌಡ ಹಮ್ಮಿಕೊಂಡಿದ್ದು, ಯಾವುದೇ ಸಭೆ ನಡೆಸಿಲ್ಲವೆಂದು ನಾಯಕರು ಹೇಳಿದ್ದಾರೆ.

ಜೆಡಿಎಸ್ ಜತೆ ಕೈ ಜೋಡಿಸಿ ಪಕ್ಷಕ್ಕೆ ಸಾಕಷ್ಟು ನಷ್ಟ ಆಗಿದೆ ಎಂಬ ಅಭಿಪ್ರಾಯ ಈ ವೇಳೆ ಕೇಳಿ ಬಂದಿದೆ. ಜೊತೆಗೆ ಹೈಕಮಾಂಡ್​ಗೆ ಈ ಬಗ್ಗೆ ಮಾಹಿತಿ ಒದಗಿಸಿ ಮೈತ್ರಿ ಮುರಿದುಕೊಳ್ಳುವ ಪ್ರಸ್ತಾಪ ಮತ್ತು ಅನರ್ಹಗೊಂಡ ಅತೃಪ್ತ ಶಾಸಕರ ನಡೆಯ ಬಗ್ಗೆಯೂ ಚರ್ಚಿಸಲಾಗಿದೆ. ಈ ಕುರಿತು ಪಕ್ಷದ ನಿಲುವು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

ABOUT THE AUTHOR

...view details