ಕರ್ನಾಟಕ

karnataka

ETV Bharat / state

ಭೈರತಿ ಬಸವರಾಜ್ ಸೋಲಿಸಲು ಕೇಶವ್ ರಾಜಣ್ಣ ಅಸ್ತ್ರ.. ಕಾಂಗ್ರೆಸ್ ನಾಯಕರ ಮಾಸ್ಟರ್ ಪ್ಲಾನ್! - karnataka political issues

ಕೆಆರ್‌ಪುರಂ ಕ್ಷೇತ್ರದಲ್ಲಿ 45 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತದಾರಿರುವ ಹಿನ್ನೆಲೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೇಶವ್ ರಾಜಣ್ಣ ಹೆಸರನ್ನು ಮಾಜಿ ಸಚಿವರಾದ ಕೆ ಜೆ ಜಾರ್ಜ್, ಡಿ ಕೆ ಶಿವಕುಮಾರ್ ಅಂತಿಮಗೊಳಿಸಿದ್ದು, ಈ ಸಂಬಂಧ ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಲು ಪ್ರಯತ್ನಿಸಿದ್ದಾರೆ.

ಕೇಶವ್ ರಾಜಣ್ಣ

By

Published : Aug 4, 2019, 8:52 PM IST

ಬೆಂಗಳೂರು: ಅನರ್ಹಗೊಂಡ ಶಾಸಕ ಭೈರತಿ ಬಸವರಾಜ್ ಸೋಲಿಸಲು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಭೈರತಿ ವಿರುದ್ಧ ಪ್ರಬಲ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನ ಮಾಡಿದ್ದು, ಭಾರತಿ ನಗರದ ಮಾಜಿ ಶಾಸಕ (ಇಂದಿನ ಪರಿವರ್ತಿತ ಶಿವಾಜಿನಗರ ವಿಧಾನಸಭಾ ಕ್ಷೇತ್ರ) ರಾಜಣ್ಣ ಪುತ್ರ ಕೇಶವ್ ರಾಜಣ್ಣಗೆ ಕಾಂಗ್ರೆಸ್ ಟಿಕೆಟ್ ನೀಡಲು ಕಾಂಗ್ರೆಸ್​ನ ಕೆಲ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಆರ್‌ಪುರಂ ಕ್ಷೇತ್ರದಲ್ಲಿ 45 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತದಾರಿರುವ ಹಿನ್ನೆಲೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೇಶವ್ ರಾಜಣ್ಣ ಹೆಸರನ್ನು ಮಾಜಿ ಸಚಿವರಾದ ಕೆ ಜೆ ಜಾರ್ಜ್, ಡಿ ಕೆ ಶಿವಕುಮಾರ್ ಅಂತಿಮಗೊಳಿಸಿದ್ದು, ಈ ಸಂಬಂಧ ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಲು ಪ್ರಯತ್ನಿಸಿದ್ದಾರೆ.

ಮಾಜಿ ಸಚಿವ ಕೆ ಜೆ ಜಾರ್ಜ್ ಅವರನ್ನು ಕೆ ಆರ್ ಪುರಂ ವಿಧಾನಸಭೆ ಉಪಚುನಾವಣೆಗೆ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಈ ಕ್ಷೇತ್ರವನ್ನು ಇವರು ಕೇಳಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಇದ್ದು, ಕ್ಷೇತ್ರದ ಗೆಲುವನ್ನು ಇವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಕೇಶವ್ ರಾಜಣ್ಣಗೆ ಕ್ಷೇತ್ರದಲ್ಲಿ ಈಗಿನಿಂದಲೇ ಪಕ್ಷ ಸಂಘಟನೆ ಮಾಡುವಂತೆ ಸೂಚನೆ ನೀಡಿರುವ ಕೈ ನಾಯಕರು, ಮುಂದೆ ಇವರನ್ನೇ ಅಭ್ಯರ್ಥಿಯಾಗಿಸುವ ಸೂಚನೆ ಹಾಗೂ ಭರವಸೆಯನ್ನು ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಹಾಗೂ ಅದಕ್ಕೂ ಮುನ್ನ ನಡೆದ ಉಪಚುನಾವಣೆ ಸಂದರ್ಭದಲ್ಲೂ ಆಕಾಂಕ್ಷಿಯಾಗಿ ಕೇಶವ್ ರಾಜಣ್ಣ ಪಕ್ಷದ ರಾಜ್ಯ ನಾಯಕರ ಬಳಿ ಮನವಿ ಮಾಡಿದ್ದರು.

ABOUT THE AUTHOR

...view details