ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳೇನು? ಇಲ್ಲಿದೆ ಫುಲ್​ ಡಿಟೇಲ್ಸ್​​​ - Karnataka assembly election 2023

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯ ಎಲ್ಲ ಅಂಶಗಳು ಈ ಕೆಳಗಿವೆ. ​​

ಕಾಂಗ್ರೆಸ್ ಪ್ರಣಾಳಿಕೆ
ಕಾಂಗ್ರೆಸ್ ಪ್ರಣಾಳಿಕೆ

By

Published : May 2, 2023, 12:38 PM IST

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದ್ದು, ಸಾಕಷ್ಟು ಜನಪ್ರಿಯ ಹಾಗೂ ಅಭಿವೃದ್ಧಿಗೆ ಪೂರಕವಾಗಬಲ್ಲ ಅಂಶಗಳನ್ನು ಒಳಗೊಂಡಿವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜೊತೆ ವಿವಿಧ ವರ್ಗಗಳಿಗೆ ವಿಶೇಷ ಯೋಜನೆಯ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಇದರ ಜೊತೆಗೆ ಹಲವು ಕ್ಷೇತ್ರಗಳ ಅಭಿವೃದ್ಧಿಗೂ ಪ್ರಣಾಳಿಕೆಯಲ್ಲಿ ಗಮನಹರಿಸಲಾಗಿದೆ.

ಪ್ರಣಾಳಿಕೆಯ ಎಲ್ಲ ಅಂಶಗಳು:

  • ಪೋಲಿಸ್ ಇಲಾಖೆಯಲ್ಲಿ ಶೇ 33ರಷ್ಟು ಮಹಿಳಾ ಪೊಲೀಸ್, ಶೇ 1 ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ
  • ಲೋಕಾಯುಕ್ತ ಬಲವರ್ಧನೆ
  • ಸರ್ಕಾರದ ಖಾಲಿ ಇರುವ ಎಲ್ಲ ಅನುಮೋದಿತ ಹುದ್ದೆಗಳು ಒಂದು ವರ್ಷದಲ್ಲಿ ಭರ್ತಿ
  • ಕನಕಪುರ ದಲ್ಲಿ ಅತ್ಯಾಧುನಿಕ ವಿಶ್ವಧರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
  • ರಾತ್ರಿ ಪಾಳಿಯ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ವೇತನ ಮಾಸಿಕ ಭತ್ಯೆ
  • ಎಲ್ಲ ಪೊಲೀಸರಿಗೆ ಒಂದು ತಿಂಗಳ ಹೆಚ್ಚುವರಿ ವೇತನ
  • ಕಾನೂನು ಉಲ್ಲಂಘನೆ ಮಾಡಿದರೆ ಭಜರಂಗದಳ, ಪಿಎಫ್​ಐ ಸಂಘಟನೆಗಳು ನಿಷೇಧ
  • ದ್ರಾಕ್ಷಿ ಬೆಳಗಾರರಿಗೆ ಸಬ್ಸಿಡಿ ಒದಗಿಸಲು 500 ಕೋಟಿ
  • ಕಾಫಿ ಕರ್ನಾಟಕ ಬ್ರ್ಯಾಂಡ್ ಸೃಷಿ
  • ಹಾಲಿನ ಸಬ್ಸಿಡಿ 5 ರೂಪಾಯಿಯಿಂದ 7ಕ್ಕೆ‌ಹೆಚ್ಚಳ
  • ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲದೇ ಗರಿಷ್ಠ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಅವಕಾಶ.
  • ಮುಂದಿನ ಐದು ವರ್ಷ ನೀರಾವರಿಗಾಗಿ 1.50 ಲಕ್ಷ ಕೋಟಿ ಅನುದಾನ ವಿನಿಯೋಗ
  • ಐದು ವರ್ಷದಲ್ಲಿ ಮೇಕೆದಾಟು ಮಹದಾಯಿ ಯೋಜನೆ ಪೂರ್ಣ. ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ
    ಮಹದಾಯಿ ಯೋಜನೆಗೆ 3000 ಕೋಟಿ ರೂ ಮೀಸಲು
  • ಬಿಜೆಪಿ ಸರ್ಕಾರದಲ್ಲಿ ಸಿದ್ಧಪಡಿಸಿರುವ ಪಠ್ಯ ಪುಸ್ತಕಗಳು‌ ರದ್ದು
  • ಕುವೆಂಪು, ಬಸವಣ್ಣ, ಆದಿಕವಿ ಪಂಪ ಸೇರಿದಂತೆ ಪ್ರಮುಖರ ವಿಚಾರಗಳು ಮತ್ತೆ ಮರಳಿ ಪಠ್ಯಪುಸ್ತಕಗಳಲ್ಲಿ ಸೇರಿಸಲು ಕ್ರಮ
  • ರಾಷ್ಟ್ರೀಯ ಶಿಕ್ಷಣ ನೀತಿ ರದ್ದು, ಕರ್ನಾಟಕ ಶಿಕ್ಷಣ ನೀತಿ ಅನುಷ್ಟಾನ
  • ಎಲ್ಲ ಆನ್​ಲೈನ್ ಸಾಲ ನೀಡುವ ಆ್ಯಪ್​ಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನೀತಿ 100 ದಿನಗಳ ಒಳಗೆ ಜಾರಿ
  • ಬಿಜೆಪಿ ಜಾರಿಗೆ ತಂದ ಎಲ್ಲ ಜನವಿರೋಧಿ ಕಾನೂನುಗಳು ಒಂದು ವರ್ಷದೊಳಗೆ ರದ್ದು
  • ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ರಾತ್ರಿ 1 ಗಂಟೆ ತನಕ ಬಸ್ ವ್ಯವಸ್ಥೆ
  • ಬಿಬಿಎಂಪಿ ನಿರ್ವಹಣೆಗಾಗಿಯೇ ಸಮಗ್ರ ಶಾಸನ ಜಾರಿ
  • ಒಂದೇ ವೇದಿಕೆ ಅಡಿ ಸಾರಿಗೆ ವಿದ್ಯುತ್ ವಸತಿ ಒಳಚರಂಡಿ, ನೀರು ಸರಬರಾಜು ಸೌಕರ್ಯ
  • ಎಸ್.ಸಿ ಎಸ್.ಟಿ ಮೀಸಲಾತಿ ಸೇರಿದಂತೆ ಶೇ.50 ರಿಂದ ಶೇ.75 ಕ್ಕೆ ಏರಿಕೆಗೆ ಸೂಕ್ತ ಕ್ರಮ
  • ಎಸ್.ಸಿ ಮೀಸಲಾತಿ ಶೇ.17, ಎಸ್.ಟಿ ಮೀಸಲಾತಿ ಶೇ.7 ಕ್ಕೆ ಏರಿಕೆ
  • ಅಲ್ಪ ಸಂಖ್ಯಾತರಿಗೆ ಶೇ.4 ರ ಮೀಸಲಾತಿ ಮರು ಸ್ಥಾಪನೆ
  • ಎಲ್ಲ ಎಸ್​ಸಿ ಎಸ್​ಟಿ ಕುಟುಂಬಗಳಿಗೆ ಮನೆ, ಸರ್ಕಾರದಿಂದಲೇ ಮನೆಗಳ ನಿರ್ಮಾಣ
  • ಆಟೋ ಚಾಲಕರ ಮಂಡಳಿ ಹಾಗೂ ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ
  • ಮಂಗಳಮುಖಿ ಮಂಡಳಿ ಸ್ಥಾಪನೆ 100 ಕೋಟಿ ಅನುದಾನ
  • ಜೋಗಪ್ಪ ಸಮುದಾಯ ಮತ್ತು ತೃತೀಯ ಲಿಂಗಿಗಳ ಮಕ್ಕಳಿಗೆ ಖಚಿತ ಉನ್ನತ ಶಿಕ್ಷಣ
  • ಪತ್ರಕರ್ತರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿ
  • ಪತ್ರಕರ್ತರ ಕಲ್ಯಾಣ ನಿಧಿಗೆ 500 ಕೋಟಿ ರೂ ಮೀಸಲು
  • ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ
  • ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ - ಕಟ್ಟು ನಿಟ್ಟಾಗಿ ಅವದಿಗೆ ನಡೆಸುವ ಕ್ರಮ ಜಾರಿ
  • 2006 ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿ ತರಲು ನಿರ್ಧಾರ
  • ಗ್ರಾಮೀಣ ರಸ್ತೆಗಳನ್ನು ಅತ್ಯಾಧುನಿಕ ರಸ್ತೆಗಳಾಗಿ ನಿರ್ಮಾಣ
  • ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯತ್​ಗಳಿಗೆ ಬಜೆಟ್​ನಲ್ಲಿ ಅನುದಾನ ಹೆಚ್ಚಳ
  • ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡುವುದು, ರೈತರ ಮೇಲಿ ಕೇಸ್​ಗಳನ್ನು ಹಿಂಪಡೆಯುವುದು
  • ಸಾವಯವ ಸರದಾರ ಯೋಜನೆ - ಸಾವಯವ ಕೃಷಿ ಉತ್ತೇಜನಕ್ಕೆ ರೂ.2,500 ಕೋಟಿ ಹೂಡಿಕೆ. ಕೃಷಿಗೆ ಅಗತ್ಯವಾದ ರಸಗೊಬ್ಬರ, ಬಿತ್ತನೆ ಬೀಜ ಕೃಷಿ ಸಲಕರಣೆಗಳನ್ನು ಗ್ರಾಮ ಪಂಚಾಯತ್ ಪಟ್ಟದಲ್ಲಿ‌ ಒದಗಿಸುವುದು.
  • ಪ್ರಕೃತಿ ವಿಕೋಪ ನಿಧಿ ಪರಿಹಾರಕ್ಕಾಗಿ ರೂ.5000 ಕೋಟಿ ಮೂಲ ನಿಧಿಯೊಂದಿಗೆ ಶಾಶ್ವತ ನಿಧಿ ಸ್ಥಾಪನೆ
  • ಶರವಾತಿ ಹಿನ್ನೀರು ಪುನರ್ವಸತಿ ಸಮಸ್ಯೆಗೆ ಆಧ್ಯತೆಯಲ್ಲಿ ಪರಿಹಾರ
  • ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆಯ ವಿಧಿಗಳ ತಿದ್ದುಪಡಿ
  • ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು 500 ಕೋಟಿ
  • ಬೆಂಗಳೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಪುಷ್ಪೋಧ್ಯಮಕ್ಕೆ ವಿಶೇಷ ಪ್ಯಾಕೇಜ್ ನೀಡಲು ರೂ.500. ಕೋಟಿ ಬಿಡುಗಡೆ
  • ನಂದಿನಿ ಬ್ರಾಂಡ್​ ಬಗ್ಗೆ ವಿಶೇಷ ಗಮನ
  • ಕುರಿಗಾಹಿ ಸಂವರ್ಧನಾ ನಿಧಿ - ಕು ರಿ ಸಾಕಾಣಿಕೆಗಾಗಿ ರೂ.1 ಸಾವಿರ ಕೋಟಿ ರೂ. ನಿಧಿ ಸ್ಥಾಪನೆ
  • ಮಿಲಿಟರಿ ಕಲ್ಯಾಣ ಕೇಂದ್ರಗಳ ಮಾದರಿಯಲ್ಲಿ ಸೇವೆಯಲ್ಲಿರುವ ಮತ್ತು ನಿವೃತ್ತಿ ಹೊಂದಿರುವ ಸಿಬ್ಬಂದಿಗಳಿಗಾಗಿ ಪ್ರತಿ ಜಿಲ್ಲೆಯಲ್ಲೂ ಸೊನ್ ಕಲ್ಯಾಣ ಕೇಂದ್ರ ಸ್ಥಾಪನೆ
  • ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ ನಾಲ್ಕು ವರ್ಷದೊಳಗೆ ಎಲ್ಲ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ
  • ಹೊಸದಾಗಿ ಪೊಲೀಸ್ ಠಾಣೆಗಳ ನಿರ್ಮಾಣ, ಹಾಗೂ ಠಾಣೆಗಳ ನವೀಕರಣ, ಉತ್ತಮ ಸೌಲಭ್ಯ ಮತ್ತು ತಂತ್ರಜ್ಞಾನ ಪರಿಕರಗಳ ನಿಯೋಜನೆ
  • ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗದ ಮಾರ್ಗಸೂಚಿಯಂತೆ ಪೊಲೀಸ್ ಠಾಣೆಗಳನ್ನು ಮಕ್ಕಳ ಸ್ನೇಹಿ ಠಾಣೆಗಳಾಗಿ ಪರಿವರ್ತನೆ, ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್ ಪೊಲೀಸ್ ಠಾಣಿಗಳ ನಿರ್ಮಾಣ, ಸೈಬರ್ ಮತ್ತು ಆರ್ಥಿಕ ಅಪರಾಧಗಳ ತನಿಖಾ ಅನ್ಯ ತರಹದ ಸಂಶೋಧನೆಗಾಗಿ ರೂ 2,00 ಕೋಟಗಳ ಮೂಲನಿಧಿ.
  • ಸರ್ಕಾರದಲ್ಲಿ ಕಾಲಿ ಇರುವ ಎಲ್ಲ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ
  • 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲಾ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಕಳೆದ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸಲಹ ಮಾಡುತ್ತಿರುವ ನೌಕರರನ್ನು ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳ ಕಾಂಗ್ರೆಸ್ ಸರಕಾರಗಳ ಆದೇಶಗಳ ಮಾದರಿಯಲ್ಲಿ ಕಾಯಂಗೊಳಿಸುವ ಪ್ರಕ್ರಿಯೆ ಜಾರಿ
  • ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ 1,500/- ರಿಂದ ರೂ. 15,000/- ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ ರೂ 7,500/- ರಿಂದ ರೂ. 10,000/- ಹೆಚ್ಚಳ ಮತ್ತು ವಿಶ್ರಾಂತಿ ವೇತನ ರೂ. 2 ಲಕ್ಷ
  • ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವಧನ ರೂ 5,000/- ದಿಂದ ರೂ 8,000/- ಹೆಚ್ಚಳ, ಸರಕಾರಿ ಸ್ವಾಮ್ಯದಲ್ಲಿರುವ ಸಾರಿಗೆ ನಿಗಮಗಳ ಉದ್ಯೋಗಿಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ಸರಕಾರಿ ಸಮಾನಾಂತರವಾದ ಹುದ್ದೆಗಳ ವೇತನಗಳಿಗೆ ಅನುಗುಣವಾಗಿ, ಆಯಾ ನಿಗಮಗಳ ಆಯವ್ಯಯಗಳ ಪತ್ರಗಳಲ್ಲಿ ಅಡಕವಾಗುವಂತೆ ಕಾರ್ಯ ರಚನೆ
  • ಬಿಸಿಯೂಟದ ಅಡಿಗೆಯವರಿಗೆ ಮಾಸಿಕ ಗೌರವಧನ ರೂ 3,600ರಿಂದ ರೂ 6,000ಕ್ಕೆ ಹೆಚ್ಚಳ
  • ಅತಿಥಿ ಮತ್ತು ಗುತ್ತಿಗೆಯ ಆಧಾರದ ಮೇಲೆ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಸರಕಾರಿ ನೇಮಕಾಗಳಲ್ಲಿ ಆದ್ಯತೆ ಇರುವಂತೆ ತಿದ್ದುಪಡಿ
  • ಕರ್ನಾಟಕ ಮಾಹಿತಿದಾರರ ಸಂರಕ್ಷಣಾ ಕಾಯ್ದೆ ಜಾರಿ
  • ಮತದಾರರ ಮಾಹಿತಿ ಕಳುವಿಗೆ ತಡೆ ಒಡ್ಡುವ ಕಾನೂನು ರಚನೆ
  • ಮಹಿಳಾ ದೌರ್ಜನ್ಯಗಳನ್ನು ತಡೆಯಲು ಕಾನೂನಿನಲ್ಲಿ ಕಠಿಣ ಕ್ರಮದ ತಿದ್ದುಪಡಿ
  • ರಾಜ್ಯದಲ್ಲಿರುವ ಎಲ್ಲಾ ನ್ಯಾಯಾಲಯಗಳ ಆಧುನೀಕರಣಕ್ಕಾಗಿ 3 ಸಾವಿರ ಕೋಟಿ ರೂಗಳ ಪ್ರತ್ಯೇಕ ನಿಧಿ
  • ಬಿಜೆಪಿ ಚಾಲ್ತಿಗೆ ತಂದ ಎಲ್ಲ ಜನವಿರೋಧಿ ಕಾನೂನುಗಳು ಒಂದು ವರ್ಷದೊಳಗೆ ರದ್ದು
  • ಭಯೋತ್ಪಾದನೆ ಹಾಗೂ ಅತ್ಯಾಚಾರ, ಮಹಿಳೆಯರ ಮೇಲೆ ಆಸಿಡ್ ದಾಳಿಯಂತ ಹೇಯ ಕೃತ್ಯಗಳ ವಿಶೇಷ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ
  • ಮಿಷನ್ ಕ್ಷೀರ ಕ್ರಾಂತಿ ಪ್ರತಿ ದಿನ 1.5 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗಾಗಿ ಯೋಜನೆ, ಪಶು ಭಾಗ್ಯ - ಉತ್ತಮ ತಳಿಯ ಹಸು ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ರೂ 3 ಲಕ್ಷದವರೆಗೆ ಸಾಲ
  • ಕುರಿಗಾಹಿ ಸಂವರ್ಧನಾ ನಿಧಿ ಕುರಿ ಸಾಕಣೆಗಾಗಿ ರೂ 1 ಸಾವಿರ ಕೋಟಿಯ ನಿಧಿ ಸ್ಥಾಪನೆ
  • ಎಲ್ಲ ಕಂದಾಯ ವಿಭಾಗಗಳಲ್ಲಿ ನಂದಿನಿ ಡೈಲಿ ತಂತ್ರಜ್ಞಾನ ಪಾಲಿಟೆಕ್ನಿಕ್‌ಗಳ ಸ್ಥಾಪನೆ
  • ಕ್ಷೀರ ಕ್ರಾಂತಿ ಕ್ರೆಡಿಟ್ ಕಾರ್ಡ್ ರೂ 50 ಸಾವಿರ ಕ್ರೆಡಿಟ್ ಮಿತಿಯೊಂದಿಗೆ ಎಲ್ಲ ಕೃಷಿಕರಿಗೆ ಕ್ರೆಡಿಟ್‌ ಕಾರ್ಡ್‌
  • ಋಣಮುಕ್ತ ಕುರಿಗಾಹಿ ಯೋಜನೆ- ಎಲ್ಲ ಕುರಿ, ಮೇಕೆ ಸಾಕಾಣಿಕೆದಾರರ ರೂ 1 ಲಕ್ಷದವರೆಗಿನ ಸಾಲ ಮನ್ನಾ
  • ಗ್ರಾಮೀಣ ಮೂಲಸೌಲಭ್ಯ, ನಮ್ಮ ಹಳ್ಳಿ - ನಮ್ಮ ಸೌಲಭ್ಯ
  • ಹಳ್ಳಿಗಳಲ್ಲಿ ಸಾರ್ವಜನಿಕ ಸೌಲಭ್ಯ ಸುಧಾರಣಿ, ಎಲ್ಲ ಮನೆಗಳಿಗೂ ಶುದ್ಧ ಕುಡಿಯುವ ನೀರು, ಶೌಚಾಲಯ, ಮೂಲ ಶಿಕ್ಷಣ, ಆರೋಗ್ಯ, ಸರ್ವ ಋತು ರಸ್ತೆಗಳಗಾಗಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ಯೋಜನೆಗೆ ಐದು ವರ್ಷಗಳಲ್ಲಿ ರೂ 50 ಸಾವಿರ ಕೋಟಿ ಹೂಡಿಕೆ
  • ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಹೈಸ್ಪೀಡ್ ವೈಫೈ ಹಾಟ್‌ಸ್ಟಾಟ್‌ ಸ್ಥಾಪನೆ
  • ಗ್ರಾಮೀಣ ಜಲ್ಲೆ ರಸ್ತೆಗಳ ಡಾಂಬರೀಕರಣ ಮತ್ತು ಮಣ್ಣಿನ ರಸ್ತೆಗಳನ್ನು ಆದ್ಯತೆ ಮೆರೆಗೆ ಪಕ್ಕಾ
    ವಾಹನ ಸಂಚಾರ ರಸ್ತೆಗಳಾಗಿ ನಿರ್ಮಾಣ
  • ಬಯಲು ಸೀಮೆಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಕ್ಕೆ 10 ಮನೆಗಳಿಗೆ ಒಂದರಂತೆ ಮರುಪೂರಣ ಬಾವಿಗಳ ನಿರ್ಮಾಣ
  • ಪ್ರತಿ ಪಂಚಾಯತ್‌ನಲ್ಲೂ ತ್ಯಾಜ್ಯ ಮರುಸಂಸ್ಕರಣಾ ಘಟಕ ಸ್ಥಾಪನೆ ಮತ್ತು ಬಲವರ್ಧನೆ
  • ತ್ಯಾಜ್ಯಗಳ ಸಮರ್ಥ ವಿಲೇವಾರಿಗಾಗಿ ಪ್ರತಿ ತಾಲೂಕಿನಲ್ಲಿ 2 ಬಯೊಮೆಥನೇಷನ್ ಘಟಕಗಳ ಸ್ಥಾಪನೆ
  • ಎಲ್ಲಾ ತಾಲೂಕುಗಳಿಗೆ ರಾಜ್ಯ ಹೆದ್ದಾರಿಗಳ ಮೂಲಕ ಸಂಪರ್ಕ
  • ತಾಲೂಕು ಪಂಚಾಯತ್/ಗ್ರಾಮ ಪಂಚಾಯತ್‌ಗಳಿಗೆ ಬಜೆಟ್‌ನಲ್ಲಿ ಅನುದಾನ ಹೆಚ್ಚಳ
  • ಬೆಳಗಾವಿ, ಹುಬ್ಬಳ್ಳಿ ಧಾರವಾಡ ಜಿಲ್ಲೆಗಳ 50 ಲಕ್ಷ ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ಮಹಾದಾಯಿ ಯೋಜನೆ
    ಮೊದಲ ಸಂಪುಟ ಸಭೆಯಲ್ಲಿ 500 ಕೋಟಿ ಮಹಾದಾಯಿ ಯೋಜನೆಗೆ ಮೀಸಲು, ಕುಡಿವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಈ ಯೋಜನೆಗಳನ್ನು ಬಳಸಿಕೊಳ್ಳಲಾಗುವುದು. ಹಳೆಯ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಆಲಮಟ್ಟಿ ಆಣೆಕಟ್ಟು ಎತ್ತರ, ಭದ್ರಾ ಮೇಲ್ದಂಡೆ ಯೋಜನೆ ಎತ್ತಿನಹೊಳೆ ಹಾಗೂ ವಾರಾಹಿ ಯೋಜನೆಗಳು ಮತ್ತು ಎಲ್ಲಾ ಉಪಕಾಲುವೆಗಳ ಯೋಜನೆಗಳು ನಿರ್ಮಾಣ
  • ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಳಸಾ ಬಂಡೂರಿ ಯೋಜನೆಯನ್ನು ಪೂರೈಸಲಾಗುವುದು. ಕೇಂದ್ರ ಸರ್ಕಾರದಿಂದ ಈ ಯೋಜನೆಗಳಗೆ ಅನುಮತಿಗಳನ್ನು ತರಲು ತ್ವರಿತ ಪ್ರಯತ್ನ ನಡೆಸಲಾಗುವುದು
  • ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷದೊಳಗೆ ಸಂಪೂರ್ಣಗೊಳಸುವುದು
  • ರಾಜ್ಯದ ಪ್ರಮುಖ ನದಿಗಳ ಸ್ವಚ್ಛತೆಗಾಗಿ ವರ್ಷಕ್ಕೆ ರೂ 1 ಸಾವಿರ ಕೋಟಿ, ಕಾಳಿ ಬೇಡ್ತಿ, ತುಂಗಭದ್ರಾ, ಮಲಪ್ರಭಾ, ಭೀಮಾ, ಕಾವೇರಿ, ಕಬಿನಿ, ಶಿಂಶಾ, ಅರ್ಕಾವತಿ, ಲಕ್ಷ್ಮಣತೀರ್ಥ, ಯಗಚಿ, ಕುಮಾರಧಾರ, ನೇತ್ರಾವತಿ ನದಿಗಳನ್ನು 5 ವರ್ಷದೊಳಗೆ ಸ್ವಚ್ಚಗೊಳಿಸುವ ಗುರಿ
  • ಕೃಷಿ ಕ್ಷೇತ್ರದ ವಿಸ್ತರಣೆಗೆ ಅನುಕೂಲವಾಗುವಂತೆ ಮತ್ತು 200 ಟಿಎಂಸಿ ಹೆಚ್ಚು ನೀರು ಶೇಖರಣೆಯಾಗುವಂತೆ ತುಂಗಭದ್ರಾ ಅಣಿಕಟ್ಟನ ಹೂಳು ತೆಗೆಯಲಾಗುವುದು

ಇದನ್ನೂ ಓದಿ:ಅಟಲ್​ ಆಹಾರ ಕೇಂದ್ರ ಘೋಷಿಸಿದ ಬಿಜೆಪಿ... ಇಂದಿರಾ ಕ್ಯಾಂಟಿನ ಭವಿಷ್ಯ ಏನಾಗುತ್ತೆ?

ABOUT THE AUTHOR

...view details