ಬೆಂಗಳೂರು: ಸದಾಶಿವನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ನಾಯಕರು ಇಂದು ಕೂಡ ಭೇಟಿ ಮಾಡಿದರು.
ಪ್ರಮುಖ ಕಾಂಗ್ರೆಸ್ ನಾಯಕರಿಂದ ಡಿ.ಕೆ. ಶಿವಕುಮಾರ್ ಭೇಟಿ ಇಂದು ಬೆಳಗ್ಗಿನಿಂದಲೇ ನಾಯಕರು ಭೇಟಿ ನೀಡಿ ಡಿಕೆಶಿ ಜತೆ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಮೋಟಮ್ಮ, ಮಾರ್ಗರೇಟ್ ಆಳ್ವಾ, ರಾಣಿ ಸತೀಶ್, ಮಾಜಿ ಸ್ಪೀಕರ್ ಕೆ.ಬಿ ಕೋಳೀವಾಡ ಭೇಟಿ ನೀಡಿ ಮಾತುಕತೆ ನಡೆಸಿದರು. ಇಂದು ಬೆಳಗ್ಗಿನ ಸಮಯವನ್ನು ವಿವಿಧ ನಾಯಕರ ಭೇಟಿಗೆ, ಮಾತುಕತೆಗೆ ಮೀಸಲಿಟ್ಟಿರುವ ಡಿಕೆಶಿ ಮಧ್ಯಾಹ್ನದ ನಂತರ ವೈದ್ಯರ ಬಳಿ ತೆರಳಿದ್ದಾರೆ. ಬೆನ್ನುನೋವು, ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣೆಗೆ ಒಳಗಾಗಬೇಕಿರುವ ಹಿನ್ನೆಲೆಯಲ್ಲಿ ಅವರು ಇಂದು ಆಸ್ಪತ್ರೆಗೆ ತೆರಳಲಿದ್ದಾರೆ. ನಿನ್ನೆ ರಾಮನಗರಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಹಲವು ನಾಯಕರಿಗೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಬಂದು ಮಾತನಾಡಿಸಿ ತೆರಳಿದ್ದಾರೆ.
ರಾಜಕೀಯ ಮಾತಾಡಿಲ್ಲ: ಇಂದು ಡಿಕೆಶಿ ಭೇಟಿ ನಂತರ ಮಾತನಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಯಾವುದೇ ರಾಜಕೀಯ ಮಾತನಾಡಿಲ್ಲ. ದೆಹಲಿಯಲ್ಲಿ ಅರೆಸ್ಟ್ ಮಾಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಿದ್ದೆ. 3 ದಿನಗಳಿಂದ ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಬಂದು ಭೇಟಿಯಾಗಿದ್ದೇನೆ. ಡಿ.ಕೆ ಶಿವಕುಮಾರ್ ಕಾಂಗ್ರೆಸ್ನಲ್ಲಿ ಯಾವಗಲೂ ಸ್ಟ್ರಾಂಗ್ ಎಂದರು.
ಪ್ರಮುಖ ಕಾಂಗ್ರೆಸ್ ನಾಯಕರಿಂದ ಡಿ.ಕೆ. ಶಿವಕುಮಾರ್ ಭೇಟಿ ಪ್ರಮುಖ ಕಾಂಗ್ರೆಸ್ ನಾಯಕರಿಂದ ಡಿ.ಕೆ. ಶಿವಕುಮಾರ್ ಭೇಟಿ ಮಾಜಿ ಸ್ಪೀಕರ್ ಕೆಬಿ ಕೋಳೀವಾಡ ಮಾತನಾಡಿ, ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಂಡು ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡ್ತಿದೆ. ದಿನೇ ದಿನೇ ಮೋದಿ ವರ್ಚಸ್ಸು ಕಳೆದುಕೊಳ್ತಿದ್ದಾರೆ. ಭಾವನತ್ಮಕ ವಿಚಾರಗಳ ಮೇಲೆ ಬಿಜೆಪಿ ಚುನಾವಣೆಗೆ ಹೋಗುತ್ತಾರೆ. ಬಿಜೆಪಿಯ ತಂತ್ರ ಜನರಿಗೆ ಗೊತ್ತಾಗುತ್ತಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.