ಕರ್ನಾಟಕ

karnataka

ETV Bharat / state

ಮತದಾರರ ನಿರ್ಧಾರಕ್ಕೆ ಗೌರವ ಕೊಡದಿದ್ದರೆ.. ಮುಂದೆ ಅವರು ತಮ್ಮ ನಿರ್ಧಾರ ಕೈಗೊಳ್ತಾರೆ : ನಜೀರ್ ಅಹ್ಮದ್ - ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ‌

ಮತದಾರರ ನಿರ್ಧಾರಕ್ಕೆ ಗೌರವ ಕೊಡದಿದ್ದರೆ ಮುಂದೆ ಅವರು ತಮ್ಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್​ ನಾಯಕ ನಜೀರ್ ಅಹ್ಮದ್ ಹೇಳಿದ್ದಾರೆ.

Congress leader Nazeer Ahamad  Nazeer Ahamad talk about over five guarantees  Congress leader Nazeer Ahamad talk in council  ಮತದಾರರ ನಿರ್ಧಾರಕ್ಕೆ ಗೌರವ  ಕಾಂಗ್ರೆಸ್​ ನಾಯಕ ನಜೀರ್ ಅಹ್ಮದ್  ಬಹುಮತ ಅಂದರೆ ಜನರು ನೀಡುವ ಅಭಿಪ್ರಾಯ  ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ  ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ‌  ರಾಜ್ಯಪಾಲರು ಎರಡು ಸಾರಿ ಭಾಷಣ
ನಜೀರ್ ಅಹ್ಮದ್

By

Published : Jul 13, 2023, 6:49 PM IST

ಬೆಂಗಳೂರು: ಬಹುಮತ ಅಂದರೆ ಜನರು ನೀಡುವ ಅಭಿಪ್ರಾಯ. ಅದಕ್ಕೆ ಗೌರವ ಕೊಡದಿದ್ದರೆ ಅವರು ತಮ್ಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಜನರ ತೀರ್ಮಾನವನ್ನು ಅವಲೋಕನ ಮಾಡಬೇಕು. ಆಪರೇಷನ್ ಕಮಲ, ಹಿಜಾಬ್, ಮೀಸಲಾತಿ ಸೇರಿದಂತೆ ಹಲವು ವಿಚಾರದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸುವ ಯತ್ನ ಕಳೆದ ನಾಲ್ಕುವರೆ ವರ್ಷ ಬಂತು. ಅಂತಿಮವಾಗಿ ಜನ ತೀರ್ಮಾನ ಕೈಗೊಂಡರು. ಈ ಸಾರಿ ಜನ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದರು.

ಶ್ರೀಮಂತರು - ಬಡವರ ನಡುವಿನ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ‌ ರೂಪಿಸಬೇಕು. ಕಾಂಗ್ರೆಸ್ ಸರ್ಕಾರ ಈ ಸಾರಿ ಪ್ರಣಾಳಿಕೆಯಲ್ಲಿ ಅದೇ ಕೆಲಸ ಮಾಡಿದೆ. ಜನರಿಗೆ ಯಾವ ಅನುಕೂಲ ಕಲ್ಪಿಸಬೇಕು ಎಂಬುದನ್ನು ರಾಜಕೀಯ ಪಕ್ಷಗಳು ಮಾಡಬೇಕು. ನಮ್ಮ ಸರ್ಕಾರ ಐದು ಭಾಗ್ಯ ತಂದು ಜನರ ಕೈಗೆ 5 - 6 ಸಾವಿರ ತಲುಪುವಂತೆ ಮಾಡಿದ್ದೇವೆ. ಸಲತ್ತುಗಳನ್ನು ಕಲ್ಪಿಸಬೇಕು ಎಂದರು.

ಹಿಂದೆ ಧರ್ಮಸಿಂಗ್ ಸಿಎಂ ಆಗಿದ್ದಾಗ ಒಂದೇ ವರ್ಷ ರಾಜ್ಯಪಾಲರು ಎರಡು ಸಾರಿ ಭಾಷಣ ಮಾಡಿದ್ದರು. ಈ ಬಾರಿ ಇದೇ ಅವಕಾಶ ಎರಡನೇ ಬಾರಿ ಒದಗಿ ಬಂದಿದೆ. ನಮಗೆ ಅವಕಾಶ ಸಿಕ್ಕಾಗ ಟೀಕೆ ಮಾಡಬೇಕು. ಹಿಂದಿನ ಸರ್ಕಾರ ಬರೆದುಕೊಟ್ಟಿದ್ದ ಭಾಷಣ ಓದಿದ್ದರು. ಈಗ ನಾವು ಬರೆದುಕೊಟ್ಟ ಭಾಷಣ ಓದಿದ್ದಾರೆ. ರಾಜ್ಯಪಾಲರ ಭಾಷಣದ ಮೂಲಕ ವಸ್ತುಸ್ಥಿತಿಯ ವಿವರ ನೀಡಬೇಕು ಎಂದರು.

ನಾವು ಸದಸ್ಯರು ಮಾಡುವ ಪರಸ್ಪರ ಆರೋಪದಿಂದ ಜನರಿಗೆ ಏನೂ ಸಮಸ್ಯೆ ಇಲ್ಲ. ಪ್ರತಿ ಸಮುದಾಯದಲ್ಲೂ ಆಚರಣೆ ಭಿನ್ನವಾಗಿರುತ್ತದೆ. ವಿವಾಹ ಕಾರ್ಯಗಳನ್ನು ಮಾಡುವ ವಿಧಾನ ಭಿನ್ನವಾಗುತ್ತದೆ. ಎಲ್ಲರೂ ಒಂದೇ ರೀತಿ ಆಚರಣೆಗಳನ್ನು ಮಾಡಲ್ಲ. ಕೆಲವರು ದೇವಾಲಯದ ಒಳಗೂ ಹೋಗುತ್ತಾರೆ, ಕೆಲವರನ್ನು ಹೊರಗೇ ಇಡಲಾಗುತ್ತದೆ. ಚುನಾವಣೆಯಲ್ಲಿ ಎಲ್ಲ ಆಯಿತು. ಹೊಸ ವಿಚಾರ ತರೋಣ ಎಂದು ಒಡೆದು ಆಳುವ ನೀತಿಯನ್ನು ಬಿಜೆಪಿ ತಂದಿತು ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ರಾಜ್ಯದ ಜನರಿಗೆ ಅನುಕೂಲ ಕಲ್ಪಿಸುವ ಕಾರ್ಯ ಮಾಡಿಲ್ಲ. ದೇಶದಲ್ಲಿ ಕೇಂದ್ರ ಸರ್ಕಾರದಿಂದ ಒಂದು ಒಳ್ಳೆಯ ಕೆಲಸ ಆಗುತ್ತಿದೆ ಎಂದರೆ ಅದು ಅದಾನಿ - ಅಂಬಾನಿ ಅಭಿವೃದ್ಧಿ ಮಾಡುತ್ತಿರುವುದು. ರಾಷ್ಟ್ರದ ಬಹು ಅಮೂಲ್ಯ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಕೇವಲ ಐದು ವರ್ಷದಲ್ಲಿ 3 ಲಕ್ಷದ 3 ಸಾವಿರ ಕೋಟಿ ಸಾಲವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.

ಯಾಕೆ ಇಷ್ಟು ಸಾಲ ಮಾಡಬೇಕಾಯಿತು?.. ಶಿಕ್ಷಣ ನಮ್ಮ ಭವಿಷ್ಯದ ತಳಪಾಯ ಎನ್ನುತ್ತಾರೆ. ಆದರೆ ಹಿಂದಿನ ಸರ್ಕಾರ ಹಾಗೂ ಹಾಲಿ ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯಕ್ರಮ ಏನು?.. ಎಲ್ಲರನ್ನೂ ಒಂದಾಗಿ ಪರಿಗಣಿಸಬೇಕಲ್ಲವೇ?.. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯಾರ್ಥಿಗಳ ಹಿತ ಕಾಪಾಡುತ್ತಿದ್ದೇವೆ. ನೀವು ಯಾರ ವಿಕಾಸ ಮಾಡಿದ್ದೀರಿ, ಯಾರ ವಿಶ್ವಾಸ ಪಡೆಯುತ್ತಿದ್ದೀರಿ?.. 2024 ರ ಚುನಾವಣೆಯಲ್ಲೂ ಇದೇ ಪುನರಾವರ್ತನೆ ಆಗಲಿದೆ. 3 ಲಕ್ಷ 27 ಸಾವಿರ ಕೋಟಿ ಮೊತ್ತದ ಬಜೆಟ್​ನಲ್ಲಿ ನಾವು ಐದು ಭಾಗ್ಯ ನೀಡಿದ್ದೇವೆ ಎಂದು ಹೇಳಿದರು.

ಓದಿ:ಸರ್ಕಾರಗಳು ನೀಡುವ ಭರವಸೆಗಳ ವಿಚಾರ; ನಿಲ್ಲದ ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಸಮರ

ABOUT THE AUTHOR

...view details