ಬೆಂಗಳೂರು: ವಿಕಾಸಸೌಧದಲ್ಲಿ ಸಚಿವ ವಿ.ಸೋಮಣ್ಣ ಕಚೇರಿ ಪೂಜೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಂಥ ದಾಳಿಗಳು ಆಗಿವೆ. ಬಿಜೆಪಿ ಸರ್ಕಾರವಿದ್ದಾಗ ಮಾತ್ರ ಈ ಥರ ನಡೆಯುತ್ತಿಲ್ಲ. ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿವೆ. ಅದಕ್ಕೆ ರಾಜಕೀಯ ಲೇಪ ನೀಡುವುದು ಸರಿಯಲ್ಲ ಎಂದರು.
ಈಗ ಕಾನೂನಾತ್ಮಕವಾಗಿ ನಡೆಯುತ್ತಿದೆ. ಅವರು ವಿವರಣೆಗಾಗಿ ನೋಟಿಸ್ ನೀಡಿದ್ದಾರೆ. ಬೇರೆ ಏನೂ ಆಗಿಲ್ಲ. ಅದನ್ನೇ ರಾಜಕಾರಣ ಅನ್ನೋದು ಸರಿಯಲ್ಲ. ಹಾಗಾದರೆ ಯಡಿಯೂರಪ್ಪ ಅವರ ಮೇಲೂ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ಆವಾಗ ಇವರ್ಯಾರೂ ಅದು ರಾಜಕರಣ ಅಂಥ ಹೇಳಿಲ್ಲ. ಇವರ ಮೇಲೆ ಏನಾದರು ಆದರೆ ಅದನ್ನು ರಾಜಕಾರಣ ಅಂತಾರೆ. ಅದೇ ಯಡಿಯೂರಪ್ಪ, ಅಮಿತ್ ಶಾ, ಮೋದಿ ಮೇಲೆ ಏನಾದರು ಆದರೆ ಅದನ್ನು ಯಾರೂ ರಾಜಕಾರಣ ಅಂಥ ಅವರು ಅನ್ನಲ್ಲ. ಇದರಿಂದ ರಾಜಕೀಯ ಲಾಭ ಪಡೆಯುವ ಅವಶ್ಯಕತೆಯೂ ನಮಗೆ ಇಲ್ಲ. ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಅದನ್ನು ಮಾಡುವುದೂ ಇಲ್ಲ ಎಂದು ತಿಳಿಸಿದರು.
ಮತ್ತೆ ಡಿಕೆಶಿ ಬೆನ್ನಿಗೆ ನಿಂತ ಮಾಜಿ ಸಿಎಂ... ಟ್ವೀಟ್ ಮೂಲಕ ಹೆಚ್ಡಿಕೆ ಹೇಳಿದ್ದೇನು?
ಮಧ್ಯಂತರ ಚುನಾವಣೆ ಬರುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ, ಅವರ ಸರ್ಕಾರ ಈಗ ಹೋಗಿದೆ. ಅವರ ಕೈಯ್ಯಲ್ಲಿ ಸುಮ್ಮನೆ ನಿಲ್ಲಕ್ಕೆ ಆಗುತ್ತಿಲ್ಲ. ಅಧಿಕಾರ ಬಿಟ್ಟು ಅವರಿಗೆ ಇರುವುದಕ್ಕೆ ಸಾಧ್ಯವೇ ಇಲ್ಲ. ಅಧಿಕಾರ ಹೋಗಿದೆ ಎಂಬ ವ್ಯಥೆಗೆ ಈ ರೀತಿ ಹೇಳುತ್ತಿದ್ದಾರೆ. ಅದರಲ್ಲಿ ಯಾವುದೇ ರೀತಿಯ ಹುರುಳೂ ಇಲ್ಲ ತಿರುಳೂ ಇಲ್ಲ. ಮಧ್ಯಂತರ ಚುನಾವಣೆ ಬರಲ್ಲ ಎಂದು ಸ್ಪಷ್ಟಪಡಿಸಿದರು.