ಕರ್ನಾಟಕ

karnataka

ETV Bharat / state

ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ 'ಭಾರತರತ್ನ' ನೀಡಿ, ಕಾಂಗ್ರೆಸ್ ಒತ್ತಾಯ

ತ್ರಿವಿಧ ದಾಸೋಹಕ್ಕೆ ಬದುಕನ್ನೇ ಮುಡುಪಿಟ್ಟ ಅವರ ಸೇವೆ ಸ್ಮರಣೀಯ. ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿತ್ತು. ಈಗ ಮೈತ್ರಿ ಸರ್ಕಾರದ ಆಗ್ರಹವೂ ಅದೇ ಆಗಿದೆ. ಈಗಲಾದರೂ ರಾಜ್ಯದ ಮನವಿಯನ್ನು ಪುರಸ್ಕರಿಸಿ ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಕಾಂಗ್ರೆಸ್

By

Published : Jun 4, 2019, 7:01 PM IST

ಬೆಂಗಳೂರು:ತುಮಕೂರಿನ ಸಿದ್ದಗಂಗಾ ಮಠದ ಪೀಠಾಧಿಪತಿಗಳಾಗಿದ್ದು, ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಕಾಂಗ್ರೆಸ್ ಒತ್ತಡ ಹಾಕಿದೆ.

ಸಿಎಂ ಎಚ್.ಡಿ. ಕುಮಾರಸ್ವಾಮಿ ನಿನ್ನೆ ಪ್ರಧಾನಿ ಮೋದಿಗೆ ಈ ವಿಚಾರವಾಗಿ ಪತ್ರ ಬರೆದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಮೈತ್ರಿ ಧರ್ಮ ಪಾಲಿಸುವ ನಿಟ್ಟಿನಲ್ಲಿ ಸಿಎಂ ಬೆಂಬಲಕ್ಕೆ ನಿಂತಿದ್ದು, ಟ್ವೀಟ್ ಮೂಲಕ ಸಹಮತ ವ್ಯಕ್ತಪಡಿಸಿದೆ. ಈ ಹಿಂದೆ ಅಂದರೆ 2018 ರ ಜ. 24 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಹಾಗೂ ಇಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಬರೆದ ಪತ್ರವನ್ನು ಲಗತ್ತಿಸಿ, ನಿನ್ನೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬರೆದ ಪತ್ರವನ್ನೂ ಲಗತ್ತಿಸಿ ಟ್ವೀಟ್ ಮಾಡಿದೆ.

ಅಂದು ಸಿದ್ದಗಂಗಾ ಶ್ರೀಗಳು ಬದುಕಿದ್ದರು. ಅವರಿಗೆ ಭಾರತ ರತ್ನ ನೀಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು. ಆದರೆ ಇಂದು ಶ್ರೀಗಳು ಇಲ್ಲ. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಎಂದು ಇಂದಿನ ಸಿಎಂ ಒತ್ತಾಯಿಸಿದ್ದಾರೆ. ಈ ಎರಡೂ ಪತ್ರ ಮುಂದಿಟ್ಟು ಪ್ರಧಾನಿಗೆ ಒತ್ತಾಯ ಹೇರುವ ಕಾರ್ಯವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಟ್ವಿಟರ್ ಮೂಲಕ ಮಾಡಿದೆ.

ತ್ರಿವಿಧ ದಾಸೋಹಕ್ಕೆ ಬದುಕನ್ನೇ ಮುಡುಪಾಗಿಟ್ಟಿದ್ದ ಅವರ ಸೇವೆ ಸ್ಮರಣೀಯ. ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿತ್ತು. ಈಗ ಮೈತ್ರಿ ಸರ್ಕಾರದ ಆಗ್ರಹವೂ ಅದೇ ಆಗಿದೆ. ಈಗಲಾದರೂ ರಾಜ್ಯದ ಮನವಿಯನ್ನು ಪುರಸ್ಕರಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ABOUT THE AUTHOR

...view details