ಬೆಂಗಳೂರು: ಶಿರಾ ಉಪ ಚುನಾವಣಾ ಪ್ರಚಾರ ಕಾರ್ಯದ ಭರಾಟೆ ನಡುವೆ ಕೊರೊನಾ ನಿಯಮಾವಳಿಯನ್ನು ಉಲ್ಲಂಘಿಸಿ ಬೃಹತ್ ಜನಸ್ತೋಮದೊಂದಿಗೆ ರ‌್ಯಾಲಿ ನಡೆಸಿದ ಕಾಂಗ್ರೆಸ್ ನಡೆಯನ್ನು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಖಂಡಿಸಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿ ಜನರ ಆರೋಗ್ಯವನ್ನು ಕಾಂಗ್ರೆಸ್ ಅಪಾಯಕ್ಕೆ ದೂಡಿದೆ: ಸಚಿವ ಡಾ. ಸುಧಾಕರ್ ಟೀಕೆ - Minister Sudhakar tweeted
ಶಿರಾ ಉಪ ಚುನಾವಣಾ ಪ್ರಚಾರ ಕಾರ್ಯದ ಭರಾಟೆ ನಡುವೆ ಕೊರೊನಾ ನಿಯಮಾವಳಿಯನ್ನು ಉಲ್ಲಂಘಿಸಿ ಬೃಹತ್ ಜನಸ್ತೋಮದೊಂದಿಗೆ ರ‌್ಯಾಲಿ ನಡೆಸಿದ ಕಾಂಗ್ರೆಸ್ ನಡೆಯನ್ನು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಖಂಡಿಸಿದ್ದಾರೆ.

ಸಚಿವ ಡಾ.ಸುಧಾಕರ್
ಕೊರೊನಾ ಸಂದರ್ಭದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ಇಂದು ಕಾಂಗ್ರೆಸ್ ಪಕ್ಷ ಶಿರಾದಲ್ಲಿ ನಡೆಸಿರುವ ಪ್ರಚಾರ ರ‍್ಯಾಲಿ ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲದೆ, ಈ ಬೇಜವಾಬ್ದಾರಿ ನಡೆಯಿಂದ ಕಾಂಗ್ರೆಸ್ ಪಕ್ಷ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ದೂಡಿದೆ ಎಂದು ಟೀಕಿಸಿ ಸುಧಾಕರ್ ಟ್ವೀಟ್ ಮಾಡಿದ್ದಾರೆ.