ಕರ್ನಾಟಕ

karnataka

ETV Bharat / state

ಮಾತಾಡೋ ಮೊದಲು ತಿಳಿದುಕೊಳ್ಳಿ.. ಸದಾನಂದಗೌಡರಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಸಿಎಂ ಹೆಚ್‌ಡಿಕೆ

ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುವುದು ಶೋಭೆಯಲ್ಲ. ಮೇಕೆದಾಟು ಯೋಜನೆಯ ಡಿಪಿಎಆರ್ ಈಗಾಗಲೇ ಆಗಿದೆ. ಕೇಂದ್ರ ಸರ್ಕಾರಕ್ಕೂ ಕೂಡ ಈಗಾಗಲೇ ಸಲ್ಲಿಸಲಾಗಿದೆ '. ರೈಲ್ವೆ ಸಚಿವಾಲಯದ ಮೇ 28 ರ ಪತ್ರದಂತೆ ಎಸ್‌ಪಿವಿ ರಚನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡರಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ​

By

Published : Jun 4, 2019, 6:50 PM IST

ಡಿವಿಎಸ್ ಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಸಿಎಂ

ಬೆಂಗಳೂರು :ಮೇಕೆದಾಟು ಯೋಜನೆ ಸಂಬಂಧ ಡಿಪಿಎಆರ್​ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದ ಕೇಂದ್ರ ಸಚಿವ ಡಿ ವಿ ಸದಾನಂದಗೌಡರಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುವುದು ಶೋಭೆಯಲ್ಲ. ಮೇಕೆದಾಟು ಯೋಜನೆಯ ಡಿಪಿಎಆರ್ ಈಗಾಗಲೇ ಆಗಿದೆ. ಕೇಂದ್ರ ಸರ್ಕಾರಕ್ಕೂ ಕೂಡ ಈಗಾಗಲೇ ಸಲ್ಲಿಸಲಾಗಿದೆ. ರೈಲ್ವೆ ಸಚಿವಾಲಯದ ಮೇ 28 ರ ಪತ್ರದಂತೆ ಎಸ್‌ಪಿವಿ ರಚನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.

ನಿಜವಾಗಿಯೂ ಕಾಳಜಿ ಇದ್ದರೆ ರಾಜಕೀಯ ಬಿಟ್ಟು ರಾಜ್ಯದ ಯೋಜನೆಗಳಿಗೆ ನೆರವು ಒದಗಿಸುವುದು ಉತ್ತಮ. ಸಬ್​ ಅರ್ಬನ್ ರೈಲು ಯೋಜನೆ ಕುರಿತು ಫೆಬ್ರವರಿ ಕೊನೆ ವಾರದಲ್ಲಿಯೇ ಸ್ವತಃ ರೈಲ್ವೆ ಸಚಿವರಾಗಿರುವ ಪಿಯೂಷ್ ಗೋಯಲ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲಾ ತೊಡಕುಗಳ ನಿವಾರಣೆಗೊಳಿಸುವುದಾಗಿ ಚರ್ಚೆ ನಡೆಸಿದ್ದಾರೆ.

ಅದರಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಂದದ ಷರತ್ತುಗಳನ್ನು ಅನುಮೋದಿಸಿ ಕಳುಹಿಸಲಾಗಿತ್ತು. ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ನಿಜವಾಗಿಯೂ ಕಾಳಜಿ ಇದ್ದರೆ 'ರಾಜಕೀಯ ಬೇಡ' ಎನ್ನುವ ನೀವು ರಾಜಕೀಯ ಬಿಟ್ಟು‌, ರಾಜ್ಯದ ಯೋಜನೆಗಳಿಗೆ ನೆರವು ಒದಗಿಸುವುದು ಉತ್ತಮ' ಎಂದು ಸಿಎಂ ಕುಮಾರಸ್ವಾಮಿ ಟ್ವಿಟರ್​ನಲ್ಲಿ ಸದಾನಂದಗೌಡರಿಗೆ ಟಾಂಗ್​ ಕೊಟ್ಟಿದ್ದಾರೆ.

ABOUT THE AUTHOR

...view details