ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ವಾಣಿಜ್ಯ ತೆರಿಗೆ ಸಂಗ್ರಹ ಕಾರ್ಯವನ್ನು ಹಂತ ಹಂತವಾಗಿ ಆರಂಭಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವಾಣಿಜ್ಯ ತೆರಿಗೆ ಸಂಗ್ರಹಕ್ಕೆ ಸಿಎಂ ಗ್ರೀನ್ ಸಿಗ್ನಲ್: 'ದಾಳಿ, ಜಪ್ತಿ ಮಾಡದೆ ಮನವೊಲಿಸಿ ತೆರಿಗೆ ಸಂಗ್ರಹಿಸಿ' - ಬಿಎಸ್ವೈ
ವಾಣಿಜ್ಯ ತೆರಿಗೆ ಸಂಗ್ರಹ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದು, ಏಕಾಏಕಿ ತೆರಿಗೆ ಪಾವತಿಗೆ ಒತ್ತಡ ಹೇರಬೇಡಿ, ಸಣ್ಣಪುಟ್ಟ ವರ್ತಕರ ಮೇಲೆ ತೆರಿಗೆ ಪಾವತಿಗೆ ಒತ್ತಡ ಹಾಕಬಾರದು. ಪಿರಮಿಡ್ ಮಾದರಿಯಲ್ಲಿ ತೆರಿಗೆ ಸಂಗ್ರಹಿಸಿ, ಸರಕು ಸಾಗಾಣಿಕೆ ಮೇಲಿನ ಸಂಗ್ರಹ ಮಾಡಿ, ದೊಡ್ಡ ದೊಡ್ಡ ವರ್ತರಕರಿಂದ ಮೊದಲು ತೆರಿಗೆ ಸಂಗ್ರಹ ಮಾಡಿ ಎಂದು ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಹಾಗು ಅರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದರು. ಕಳೆದ ಒಂದೂವರೆ ತಿಂಗಳ ವಾಣಿಜ್ಯ ತೆರಿಗೆ ಸಂಗ್ರಹದ ಅಂಕಿ ಅಂಶಗಳ ವಿವರವನ್ನು ಪಡೆದುಕೊಂಡರು. ಲಾಕ್ ಡೌನ್ ನಂತರ ವಾಣಿಜ್ಯ ತೆರಿಗೆ ಸಂಗ್ರಹ ಸ್ಥಗಿತಗೊಳಿಸಲಾಗಿದೆ, ನಮ್ಮ ಇಲಾಖೆ ವಾಹನಗಳನ್ನೂ ಲಾಕ್ ಡೌನ್ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ ಇನ್ನು ವಾಹನಗಳು ನಮಗೆ ಲಭ್ಯವಾಗಿಲ್ಲ ಇಂದಿನಿಂದ ವಾಹನಗಳನ್ನು ವಾಪಸ್ ಮಾಡಲು ಆರಂಭಿಸಿದ್ದು ಸಧ್ಯದಲ್ಲೇ ತೆರಿಗೆ ಸಂಗ್ರಹ ಕಾರ್ಯ ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ವಾಣಿಜ್ಯ ತೆರಿಗೆ ಸಂಗ್ರಹ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ನೀಡಿದ್ದು, ಏಕಾಏಕಿ ತೆರಿಗೆ ಪಾವತಿಗೆ ಒತ್ತಡ ಹೇರಬೇಡಿ,ಸಣ್ಣಪುಟ್ಟ ವರ್ತಕರ ಮೇಲೆ ತೆರಿಗೆ ಪಾವತಿಗೆ ಒತ್ತಡ ಹೇರಬೇಡಿ.ಪಿರಮಿಡ್ ಮಾದರಿಯಲ್ಲಿ ತೆರಿಗೆ ಸಂಗ್ರಹಿಸಿ,ಸರಕು ಸಾಗಾಣಿಕೆ ಮೇಲಿನ ಸಂಗ್ರಹ ಮಾಡಿ, ದೊಡ್ಡ ದೊಡ್ಡ ವರ್ತರಕರಿಂದ ಮೊದಲು ತೆರಿಗೆ ಸಂಗ್ರಹ ಮಾಡಿ. ತೆರಿಗೆ ಸಂಗ್ರಹದ ವೇಳೆ ಮಾನವೀಯತೆ ಮರೆಯದಿರಿ, ತಕ್ಷಣಕ್ಕೆ ದಾಳಿ,ಸೀಜ್ ನಂತಹ ಕೆಲಸಕ್ಕೆ ಮುಂದಾಗದೆ ಮನವೊಲಿಸಿ ತೆರಿಗೆ ಸಂಗ್ರಹ ಮಾಡಿ. ಈಗಿನಿಂದ ತೆರಿಗೆ ಆರಂಭಕ್ಕೆ ಮುಂದಾದರೆ ಇನ್ನೆರಡು ತಿಂಗಳಿನಲ್ಲಿ ತೆರಿಗೆ ಸಂಗ್ರಹ ಸಹಜ ಸ್ಥಿತಿಗೆ ಬರಲಿದೆ ಎಂದು ಸಿಎಂ ಸೂಚನೆ ನೀಡಿದ್ದಾರೆ.