ಕರ್ನಾಟಕ

karnataka

ಕೆ. ಆರ್. ಮಾರುಕಟ್ಟೆ ಸಂಪೂರ್ಣ ಒತ್ತುವರಿ ತೆರವು: ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ

By

Published : Mar 29, 2019, 3:36 PM IST

ಕೆ.ಆರ್. ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿದ್ದ ವ್ಯಾಪಾರಿಗಳನ್ನು ಎಬ್ಬಿಸಿ ಒತ್ತುವರಿ ತೆರವು ಮಾಡಿದರು. ಅನಧಿಕೃತವಾಗಿ ಕಟ್ಟಿಕೊಂಡಿದ್ದ ಹಣ್ಣಿನ ಮಳಿಗೆಗಳು ಹಾಗೂ ಕಟ್ಟಡದೊಳಗಿನ ಮೆಟ್ಟಿಲುಗಳನ್ನೆಲ್ಲ ಕಿತ್ತುಹಾಕಲಾಯ್ತು.

ಕೆ. ಆರ್. ಮಾರುಕಟ್ಟೆ

ಬೆಂಗಳೂರು: ದಶಕದಿಂದ ಧೂಳು, ಕಸದ ರಾಶಿ, ಅನಧಿಕೃತ ಮಳಿಗೆಗಳಿಂದ ತುಂಬಿ ಹೋಗಿದ್ದ ನಗರದ ಕೆ.ಆರ್. ಮಾರುಕಟ್ಟೆಯ ಸಂಪೂರ್ಣ ಚಿತ್ರಣ ಇಂದು ಬದಲಾಗಿದೆ.

ಹೈಕೋರ್ಟ್ ಕೆ.ಆರ್ ಮಾರುಕಟ್ಟೆಗೆ ಸ್ವಚ್ಛತೆ ಹಾಗೂ ಸುರಕ್ಷತೆ ಒದಗಿಸುವಂತೆ ಖಡಕ್ ಆದೇಶ ನೀಡಿದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಪೊಲೀಸ್ ಭದ್ರತೆಯೊಂದಿಗೆ ಕೆ.ಆರ್ ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿದ್ದ ವ್ಯಾಪಾರಿಗಳನ್ನು ಎಬ್ಬಿಸಿ ಒತ್ತುವರಿ ತೆರವು ಮಾಡಿದರು. ಅನಧಿಕೃತವಾಗಿ ಕಟ್ಟಿಕೊಂಡಿದ್ದ ಹಣ್ಣಿನ ಮಳಿಗೆಗಳು ಹಾಗೂ ಕಟ್ಟಡದೊಳಗಿನ ಮೆಟ್ಟಿಲುಗಳನ್ನೆಲ್ಲ ಕಿತ್ತುಹಾಕಲಾಯ್ತು.

ಕೆ. ಆರ್. ಮಾರುಕಟ್ಟೆ

ಆದರೆ ಇನ್ನೊಂದೆಡೆ ಸಾವಿರಕ್ಕೂ ಹೆಚ್ಚು ಸಣ್ಣ-ಪುಟ್ಟ ಬೀದಿಬದಿ ವ್ಯಾಪಾರಿಗಳು ನೆಲೆ ಕಳೆದುಕೊಂಡು ನಿರ್ಗತಿಕರಾದ್ರು. ಕಣ್ಣೀರು ಹಾಕಿ ನಮಗೆ ವ್ಯಾಪಾರ ನಡೆಸಲು ಬಿಡಿ ಎಂದು ಅಧಿಕಾರಿಗಳ ಬಳಿ ಗೋಗರೆದರು.

ಈ ಬಗ್ಗೆ ಮಾತನಾಡಿದ ಪಾಲಿಕೆ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಮಾರುಕಟ್ಟೆಯಲ್ಲಿ ಏನೇ ತುರ್ತು ಪರಿಸ್ಥಿತಿ ಎದುರಾದ್ರು ಅಗ್ನಿಶಾಮಕ ವಾಹನ ಬರುವುದಕ್ಕೂ ದಾರಿ ಇರಲಿಲ್ಲ. ಎಷ್ಟೇ ಬಾರಿ ಅನಧಿಕೃತ ವ್ಯಾಪಾರಸ್ಥರನ್ನು ತೆರವು ಮಾಡಿದ್ರೂ ಮತ್ತೆ ಬಂದು ಜಾಗ ಆಕ್ರಮಿಸುತ್ತಿದ್ರು. ಹೀಗಾಗಿ ವ್ಯಾಪಾರಿಗಳಲ್ಲಿ ಶಿಸ್ತು ತರಲು ಒತ್ತುವರಿ ಮಾಡಿಕೊಂಡಿದ್ದ ಎಲ್ಲಾ ಅಂಗಡಿಗಳನ್ನು ತೆರವು ಮಾಡಿದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details