ಬೆಂಗಳೂರು: ಜಾಮೀನುರಹಿತ ವಾರೆಂಟ್ ಆದೇಶ ಹಿನ್ನೆಲೆ ಮಠ, ಎದ್ದೇಳು ಮಂಜುನಾಥ್ ಚಿತ್ರಗಳ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀನಿವಾಸ್ ಎಂಬುವರಿಗೆ 30 ಲಕ್ಷ ಚೆಕ್ ಬೌನ್ಸ್ ಸಂಬಂಧ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಗೈರಾದ ಹಿನ್ನೆಲೆಯಲ್ಲಿ ಗುರುಪ್ರಸಾದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಬಂಧಿಸುವಂತೆ ಕೋರ್ಟ್ ಆದೇಶಿತ್ತು. ಈ ಸಂಬಂಧ ಗಿರಿನಗರ ಪೊಲೀಸರು ಗುರುಪ್ರಸಾದ್ ಅವರನ್ನು ವಶಕ್ಕೆ ಪಡೆದುಕೊಂಡು ಕೆಲವೇ ಹೊತ್ತಿನಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚೆಕ್ ಬೌನ್ಸ್ ಕೇಸ್: ಗುರುಪ್ರಸಾದ್ ಪೊಲೀಸ್ ವಶಕ್ಕೆ - ETV Bharath Kannada news
ಚೆಕ್ ಬೌನ್ಸ್ ಪ್ರಕರಣ - ಮಠ, ಎದ್ದೇಳು ಮಂಜುನಾಥ್ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಪೊಲೀಸ್ ವಶಕ್ಕೆ.
ಗುರುಪ್ರಸಾದ್ ಪೊಲೀಸ್ ವಶಕ್ಕೆ