ಕರ್ನಾಟಕ

karnataka

ETV Bharat / state

ಮುಂದುವರೆದ ಶೋಧ ಕಾರ್ಯ: ನಟಿ ಸಂಜನಾ ಗಲ್ರಾನಿಗೂ ಕಂಟಕವಾಗುತ್ತಾ ಡ್ರಗ್ಸ್​ ಪ್ರಕರಣ? - ಬೆಂಗಳೂರು ಡ್ರಗ್ಸ್​ ಪ್ರಕರಣ

6ಕ್ಕೂ ಹೆಚ್ಚು ಮಂದಿ ಸಿಸಿಬಿ ಅಧಿಕಾರಿಗಳು ಸದ್ಯ ನಟಿ ಸಂಜನಾ ಅಪಾರ್ಟ್​ಮೆಂಟ್​ನಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.‌

CCB raid on sanjana home
ಮುಂದುವರೆದ ಶೋಧ ಕಾರ್ಯ....ನಟಿ ಸಂಜನಾ ಗುಲ್ರಾನಿಗೆ ಕುತ್ತಾಗುತ್ತ ಡ್ರಗ್ಸ್​ ಪ್ರಕರಣ

By

Published : Sep 8, 2020, 8:28 AM IST

Updated : Sep 8, 2020, 8:33 AM IST

ಬೆಂಗಳೂರು: ನಟಿ ಸಂಜನಾ ಗುಲ್ರಾನಿ‌ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, 6ಕ್ಕೂ ಹೆಚ್ಚು ಮಂದಿ ಸಿಸಿಬಿ ಅಧಿಕಾರಿಗಳು ಸದ್ಯ ನಟಿ ಸಂಜನಾ ಅಪಾರ್ಟ್​ಮೆಂಟ್​ನಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.‌

ರಾಗಿಣಿ ತನಿಖಾಧಿಕಾರಿಗಳಾದ ಇನ್ಸ್​​ಪೆಕ್ಟರ್ ಪುನೀತ್, ಅಂಜುಮಾಲಾ, ಸಂಜನಾ ಮನೆಯಲ್ಲಿ ಶೋಧ ನಡೆಸಿ ಸಂಜನಾ ಬಳಿ ಮಾಹಿತಿ ಹಾಗೂ ಹೇಳಿಕೆ ಪಡೆಯಲಿದ್ದಾರೆ. ಹಾಗೆಯೇ ನಟಿಯ ಮೊಬೈಲ್​​ ಕೂಡ ವಶಕ್ಕೆ ಪಡೆಯಲಾಗಿದೆ.‌ ಸಂಜನಾ ಆಪ್ತ ರಾಹುಲ್ ಹಾಗೂ ಮಂಗಳೂರು ಮೂಲದ ಪೃಥ್ವಿ ಶೆಟ್ಟಿಯನ್ನು ಕಳೆದ ಮೂರು ದಿನಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದಿರಾ ನಗರದ 100 ಫೀಟ್ ರಸ್ತೆಯಲ್ಲಿ ಸಂಜನಾ ಇದ್ದು, ಈ ಮನೆಯಲ್ಲಿಯೇ ಬಂಧಿತ ರಾಹುಲ್ ಕೂಡ ಇದ್ದ ಎಂದು ತಿಳಿದು ಬಂದಿದೆ. ಇವರು ಪಾರ್ಟಿ ಮಾಡುತ್ತಾ ಬಹಳ ಆತ್ಮೀಯರಾಗಿದ್ದರಂತೆ. ರಾಹುಲ್ ಬಂಧನದ ಬಳಿಕ ರಾಹುಲ್ ನನ್ನ ಸಹೋದರ. ಆತ ತಪ್ಪು ಮಾಡಿಲ್ಲವೆಂಬ ಸಂಜಾನಾ ಹೇಳಿಕೆ ನೀಡಿದ್ದರು.

ಮುಂದುವರೆದ ಶೋಧ ಕಾರ್ಯ

ಸದ್ಯ ಬಂಧಿತನಾಗಿರುವ ರಾಹುಲ್ ಹೇಳಿಕೆ ಹಾಗೂ ರಾಹುಲ್ ಮೊಬೈಲ್​ನಲ್ಲಿರುವ ಸಂಜನಾ ಚಾಟಿಂಗ್ ಆಧಾರದ ಮೇರೆಗೆ ತನಿಖೆ ಮುಂದುವರೆದಿದೆ‌. ಮತ್ತೊಂದೆಡೆ ಸಂಜನಾ ಆಪ್ತತರಾಗಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಸಂಜನಾಗೆ ಕಳೆದ 5 ವರ್ಷಗಳಿಂದ ಪರಿಚಯ. ಸಿಸಿಬಿ ವಿಚಾರಣೆಗೆ ಒಳಪಡಿಸಿದಾಗ ಸಂಜನಾ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದರು ಹಾಗೆಯೇ ರಾಹುಲ್ ಜೊತೆ ಆತ್ಮೀಯತೆ ಹೇಗಿತ್ತು, ಹೈ ಎಂಡ್ ಪಾರ್ಟಿಗಳಲ್ಲಿ ಹಾಗೂ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದ ಬಗ್ಗೆಯೂ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ.

ಸ್ಯಾಂಡಲ್​​​ವುಡ್​​​​ ಡ್ರಗ್ಸ್​ ಜಾಲ: ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ದಾಳಿ

ಮತ್ತೊಂದೆಡೆ ಪೃಥ್ವಿ ಶೆಟ್ಟಿ ನಟಿ ಸಂಜನಾ ಜೊತೆ ನಿರಂತರ ಸಂಪರ್ಕ ಇರುವ ವಿಚಾರ ಅಧಿಕಾರಿಗಳಿಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ನಟಿ ಸಂಜನಾ ಜೊತೆ ವ್ಯವಹಾರಗಳನ್ನು ಹೊಂದಿದ್ದರು. ಸದ್ಯ ಜಂಟಿ ವ್ಯವಹಾರಗಳ ಕುರಿತು ಕೆಲ ಸೀಕ್ರೇಟ್ಸ್, ಒಟ್ಟು ಆದಾಯವೇನು, ವ್ಯವಹಾರಗಳ ಮೂಲ ಇವೆಂಟ್ ಮ್ಯಾನೇಜ್ಮೆಂಟಾ?, ಅಥವಾ ಬೇರೆಯದ್ದಾ, ಈ ಎಲ್ಲದರ ಕುರಿತು ಮಾಹಿತಿ ಪಡೆದು ದಾಳಿ ಮುಂದುವರೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Last Updated : Sep 8, 2020, 8:33 AM IST

ABOUT THE AUTHOR

...view details