ಕರ್ನಾಟಕ

karnataka

ETV Bharat / state

ಸಿಸಿಬಿ ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ವಿಷ್ಯ: ಕ್ರಿಕೆಟ್​ ತಂಡಕ್ಕೂ ನಶೆ ಏರಿಸಿದ್ನಾ ಸಂಜನಾ ಆಪ್ತ ಶೇಖ್ ಫಾಜಿಲ್!? - CCB investigation

ನಟಿ ಸಂಜನಾ ಆಪ್ತ ಶೇಖ್ ಫಾಜಿಲ್​ಗಾಗಿ ಸಿಸಿಬಿ ಹುಡುಕಾಟ ನಡೆಸುತ್ತಿದೆ. ಸದ್ಯ ಫಾಜಿಲ್​ ತಲೆಮರೆಸಿಕೊಂಡಿದ್ದು, ಈತನ ಹಿನ್ನೆಲೆಯನ್ನು ಸಿಸಿಬಿ ಕಲೆಹಾಕಿದೆ. ಈ ವೇಳೆ ಸ್ಯಾಂಡಲ್​ವುಡ್ ಹಾಗೂ ಬಾಲಿವುಡ್ ಜೊತೆಗೆ ಮಾತ್ರವಲ್ಲದೆ, ಕ್ರಿಕೆಟ್​ನಲ್ಲಿ ಕೂಡ ಭಾಗಿಯಾಗಿರೋದು ಬಯಲಾಗಿದೆ.

ನಟಿ ಸಂಜನಾ ಆಪ್ತ  ಶೇಖ್ ಫಾಜಿಲ್​
ನಟಿ ಸಂಜನಾ ಆಪ್ತ ಶೇಖ್ ಫಾಜಿಲ್​

By

Published : Sep 13, 2020, 10:12 AM IST

ಬೆಂಗಳೂರು:ಸ್ಯಾಂಡಲ್‌ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಆಪ್ತ ಶೇಖ್ ಫಾಜಿಲ್​ಗಾಗಿ ಸಿಸಿಬಿ ಶೋಧ ನಡೆಸುತ್ತಿದೆ. ಈತನಿಗೆ ಬಾಲಿವುಡ್​ ನಂಟಿದೆ ಎಂಬ ಮಾಹಿತಿ ಲಭಿಸಿತ್ತು. ಆದರೆ ಇದೀಗ ಬಾಲಿವುಡ್​ ಜೊತೆಗೆ ಕ್ರಿಕೆಟ್​ ಲೋಕದ ನಂಟೂ ಇದೆ ಎಂಬ ವಿಷಯ ಬಹಿರಂಗವಾಗಿದೆ.

ಈತ ನಟಿ ಸಂಜನಾ ಆಪ್ತನಾಗಿದ್ದು, ಆಕೆಯ ಜೊತೆ ಪಾರ್ಟಿ ಪಬ್​ಗಳಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗ್ತಿದೆ. ಸದ್ಯ ಫಾಜಿಲ್​ ತಲೆಮರೆಸಿಕೊಂಡಿದ್ದು, ಈತನ ಹಿನ್ನೆಲೆಯನ್ನು ಸಿಸಿಬಿ ಕಲೆಹಾಕಿದೆ. ಈ ವೇಳೆ ಸ್ಯಾಂಡಲ್​ವುಡ್ ಹಾಗೂ ಬಾಲಿವುಡ್ ಜೊತೆಗೆ ಮಾತ್ರವಲ್ಲದೆ, ಈತ ಕ್ರಿಕೆಟ್​ನಲ್ಲಿ ಕೂಡ ಭಾಗಿಯಾಗಿರೋದು ಬಯಲಾಗಿದೆ.

ಶೇಖ್ ಫಾಜಿಲ್​ಗಾಗಿ ಸಿಸಿಬಿ ಹುಡುಕಾಟ

ಪ್ರತಿಷ್ಠಿತ ಅಬುದಾಬಿ ಟಿ-10 ಕ್ರಿಕೆಟ್ ಲೀಗ್‌ನ ತಂಡವೊಂದಕ್ಕೆ ಫಾಜಿಲ್ ಪಾಲುದಾರಿಕೆ ಹೊಂದಿರುವ ಕ್ಯಾಸಿನೋ ಪ್ರಾಯೋಜಕತ್ವ ನೀಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿರುವ ಬೆಲೀಸ್ ಕ್ಯಾಸಿನೋ ಪ್ರಾಯೋಜಕತ್ವದ ಮೂಲಕ ಪ್ರಭಾವಿ ಆಟಗಾರರನ್ನೊಳಗೊಂಡ ತಂಡಕ್ಕೂ ಮಾದಕ ದ್ರವ್ಯ ರವಾನೆಯಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ‌.

ಬೆಲೀಸ್ ಕ್ಯಾಸಿನೋದ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಶೇಖ್ ಫಾಜಿಲ್ ಅಬುದಾಬಿ ಟಿ-10 ಲೀಗ್‌ನ ತಂಡವೊಂದಕ್ಕೆ 2019ರಿಂದ ಪ್ರಾಯೋಜಕ ನೀಡುತ್ತಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಹಾಲಿ, ಮಾಜಿ ಸ್ಟಾರ್ ಆಟಗಾರರನ್ನ ಹೊಂದಿರುವ ಈ ತಂಡ ಟೂರ್ನಿಯ ಪ್ರಮುಖ ತಂಡಗಳಲ್ಲಿ‌ ಒಂದಾಗಿದ್ದು, ತಂಡದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗೂ ಶೇಖ್ ಫಾಜಿಲ್ ನಂಟು ಹೊಂದಿದ್ದಾನೆ ಎಂದು ಹೇಳಲಾಗ್ತಿದೆ. ಟೂರ್ನಿಯುದ್ದಕ್ಕೂ ಆ ತಂಡದೊಂದಿಗೆ ಗುರುತಿಸಿಕೊಂಡಿದ್ದ ಶೇಖ್ ಫಾಜಿಲ್ ಮ್ಯಾಚ್ ನಂತರ ಪಾರ್ಟಿಗಳಲ್ಲಿ ಆಟಗಾರರಿಗೂ ಮಾದಕ ದ್ರವ್ಯ ಪೂರೈಸಿರುವ ಅನುಮಾನ ಮೂಡಿದೆ.

ನಟಿ ಸಂಜನಾ ಆಪ್ತ ಶೇಖ್ ಫಾಜಿಲ್​

ಸದ್ಯ ಫಾಜಿಲ್​ನ ಬೃಹತ್ ಜಾಲ ಬೆಳಕಿಗೆ ಬರುತ್ತಿದ್ದು, ಆತನ ಸುತ್ತ ಅನುಮಾನಗಳು ಮೂಡಿವೆ. ಸದ್ಯ ಆತನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details