ಕರ್ನಾಟಕ

karnataka

ETV Bharat / state

ಸಿಸಿಬಿ ವಶದಲ್ಲಿ ರಾಗಿಣಿ-ಸಂಜನಾ: ಇಂದಿನಿಂದ ಮಹಿಳಾಧಿಕಾರಿಗಳಿಂದ ಡ್ರಿಲ್​​​​​ - ನಟಿ ಸಂಜನಾ ಗಲ್ರಾನಿ ಲೆಟೆಸ್ಟ್ ನ್ಯೂಸ್

ಸ್ಯಾಂಡಲ್​ವುಡ್​ ಡ್ರಗ್​​ ಪ್ರಕರಣ ಸಂಬಂಧ ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ಈ ಪ್ರಕರಣದಡಿ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿಯನ್ನು ಮಹಿಳಾ ಸಾಂತ್ವನ ಕೆಂದ್ರದಲ್ಲಿ ಇರಿಸಲಾಗಿದ್ದು, ಇಂದಿನಿಂದ ಕಟ್ಟುನಿಟ್ಟಿನ ತನಿಖೆ ಮುಂದುವರೆಯಲಿದೆ.

CCB Investigation for actresss Ragini and Sanjana
ಇಬ್ಬರು ನಟಿಯರು ಸಿಸಿಬಿ ವಶದಲ್ಲಿ; ಇಂದಿನಿಂದ ಇಬ್ಬರಿಗೂ ಮಹಿಳಾಧಿಕಾರಿಗಳಿಂದ ಡ್ರಿಲ್​

By

Published : Sep 9, 2020, 7:25 AM IST

ಬೆಂಗಳೂರು:ಸ್ಯಾಂಡಲ್‌ವುಡ್‌ ಡ್ರಗ್​ ಪ್ರಕರಣ ಸಂಬಂಧ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ನಿನ್ನೆ ಸಂಜನಾ ಮನೆ ಮೇಲೂ ದಾಳಿ ನಡೆಸಿ ಶಾಕ್ ನೀಡಿದೆ. ಈ ಪ್ರಕರಣದಡಿ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿಯನ್ನು ಮಹಿಳಾ ಸಾಂತ್ವನ ಕೆಂದ್ರದಲ್ಲಿ ಇರಿಸಲಾಗಿದ್ದು, ಕಟ್ಟುನಿಟ್ಟಿನ ತನಿಖೆ ಮುಂದುವರೆಯಲಿದೆ.

ಚಂದನವನದಲ್ಲಿ ತಮ್ಮದೇ ಛಾಪು ಮೂಡಿಸಿ ಈ ನಟಿಯರು ಹೆಸರು ಗಳಿಸಿದ್ದಾರೆ. ಆದ್ರೆ ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸದ್ಯ ಇಬ್ಬರು ನಟಿಯರು ಸಿಸಿಬಿ ವಶದಲ್ಲಿದ್ದಾರೆ. ಪ್ರಕರಣದಲ್ಲಿ ರಾಗಿಣಿ A2 ಆದರೆ, ಸಂಜಾನಾ ಎ14 ಆಗಿದ್ದು, ಇಂದಿನಿಂದ ಮತ್ತೆ ಈ ಇಬ್ಬರ ವಿಚಾರಣೆ ಮಡಿವಾಳ ಬಳಿ ‌ಇರುವ ಎಫ್​​ಎಸ್​ಎಲ್ ಕಚೇರಿಯಲ್ಲಿ ನಡೆಯಲಿದೆ. ಈಗಾಗಲೇ ಸಂಜನಾ ಗಲ್ರಾನಿ ಸಿಸಿಬಿ ಪೊಲೀಸರ ತನಿಖೆಗೆ ಸಹಕಾರ ನೀಡಿದ್ದು, ಒಟ್ಟು 24 ಜನರ ಹೆಸರನ್ನು ತಿಳಿಸಿದ್ದಾರೆ. ಇನ್ನಷ್ಟು ಮಾಹಿತಿ ಕಲೆಹಾಕಲು ಸಂಜನಾರನ್ನು ಸಿಸಿಬಿ‌ ಇನ್ಸ್​​​ಪೆಕ್ಟರ್​​ ಅಂಜುಮಾಲಾ ಹಾಗೂ ರಾಗಿಣಿಯನ್ನು ಶಿವಾಜಿನಗರ ಇನ್ಸ್​​​ಪೆಕ್ಟರ್ ಕಾತ್ಯಾಯಿನಿ ವಿಚಾರಣೆ ‌ನಡೆಸಿ ಬಳಿಕ ಹಿರಿಯಾಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

ಈಗಾಗಲೇ ಸಂಜನಾರ ಆಪ್ತ ರಾಹುಲ್ ಸಿಸಿಬಿ ವಶದಲ್ಲಿದ್ರೆ, ಮತ್ತೋರ್ವ ಆಪ್ತೆ ಮಂಗಳೂರು ಮೂಲದ ಪೃಥ್ವಿ ಶೆಟ್ಟಿಯನ್ನು ಸಿಸಿಬಿ ಕಳೆದ ಮೂರು ದಿನಗಳಿಂದ ತೀವ್ರ ವಿಚಾರಣೆ ನಡೆಸಿತ್ತು. ಬಂಧಿತ ರಾಹುಲ್ ಸಂಜನಾ ಆಪ್ತನಾಗಿದ್ದುಕೊಂಡು ಡ್ರಗ್ ಪೆಡ್ಲಿಂಗ್​ನಲ್ಲಿ ಸಕ್ರಿಯವಾಗಿರೋದು, ಸಂಜನಾಗೂ ಈ ಬಗ್ಗೆ ಮಾಹಿತಿ‌ ಇರುವ ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ. ಮತ್ತೊಂದೆಡೆ 2 ದಿನಗಳಿಂದ ಸಿಸಿಬಿ ವಿಚಾರಣೆಗೆ ಹಾಜರಾಗ್ತಿದ್ದ ಪೃಥ್ವಿ ಶೆಟ್ಟಿ ಹಾಗೂ ಸಂಜನಾ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ‌ ಹೊಂದಿರುವುದು, ಡ್ರಗ್ ಪೆಡ್ಲರ್​ಗಳ ಸಂಪರ್ಕ ಹೊಂದಿರುವುದು ಸಹ ಸಿಸಿಬಿ ಅಧಿಕಾರಿಗಳಿಗೆ ಖಚಿತವಾಗಿದೆ. ಇದೇ ಹಿನ್ನೆಲೆಯಲ್ಲಿ ಸಂಜನಾ ಮನೆ ಮೇಲೆ ದಾಳಿ‌ ನಡೆಸಿದ ಸಿಸಿಬಿ ಆಕೆಯನ್ನು ಬಂಧಿಸಿ ನ್ಯಾಯಾಲಯದ ಮಂದೆ ಹಾಜರುಪಡಿಸುವ ಮೂಲಕ 5 ದಿನ ವಶಕ್ಕೆ ಪಡೆದಿದೆ.

ಮತ್ತೊಂದೆಡೆ ಆರೋಪಿಗಳ ಜೊತೆ ಸಂಜನಾ ನೇರ ಸಂಪರ್ಕ ಹೊಂದಿರುವ ಬಗ್ಗೆ ತನಿಖೆಯಲ್ಲಿ‌ ತಿಳಿದು ಬಂದಿದೆ. ಸಂಜನಾ ಮೊಬೈಲ್, ಲ್ಯಾಪ್‌ಟಾಪ್​ನ ಕೆಲ ಮಾಹಿತಿಗಳು ಡಿಲೀಟ್ ಆಗಿರುವ ಹಿನ್ನೆಲೆಯಲ್ಲಿ ಡಾಟಾ ರಿಟ್ರೀವ್ ಮಾಡಲು FSLಗೆ ರವಾನಿಸಿದ್ದಾರೆ. ಹಾಗೆಯೇ ಮತ್ತೊಂದೆಡೆ ರಾಗಿಣಿ ಆಪ್ತ ರವಿಶಂಕರ್ ಹಾಗೂ ವೀರೆನ್ ಖ‌ನ್ನಾ ಬಳಿಯಿಂದ ಕೂಡ ಸಿಸಿಬಿ ಅಧಿಕಾರಿಗಳು ಮಹತ್ತರ ಮಾಹಿತಿಯನ್ನು ಕಲೆಹಾಕಿ ರಾಗಿಣಿ ದ್ವಿವೇದಿಯನ್ನು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಸ್ಯಾಂಡಲ್​​ವುಡ್​​ನ ಇಬ್ಬರು ತಾರೆಯರು ಸಿಸಿಬಿ ಬೋನಿನಲ್ಲಿದ್ದು, ಮಹತ್ವದ ಮಾಹಿತಿಗಳನ್ನು ಕಲೆಹಾಕುವಲ್ಲಿ ಸಿಸಿಬಿ ಅಧಿಕಾರಿಗಳು ಸಕ್ರಿಯವಾಗಿದ್ದಾರೆ.

ABOUT THE AUTHOR

...view details