ಕರ್ನಾಟಕ

karnataka

ETV Bharat / state

ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ: ಏಳು ಆರೋಪಿಗಳ ಬಂಧನ - ಜೂಜಾಟ ಅಡ್ಡೆ ಮೇಲೆ ಸಿಸಿಬಿ ದಾಳಿ

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ಸರಹದ್ದಿನ ಶ್ರೀನಿವಾಸ್ ಲೇಔಟ್​​ನ ಮುಖ್ಯರಸ್ತೆಯಲ್ಲಿ ಕೆಲ ಜನರು ಜೂಜಾಟದಲ್ಲಿ ನಿರತರಾಗಿದ್ದರು. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಅಡ್ಡೆ ಮೇಲೆ ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.

ಜೂಜಾಟ ಅಡ್ಡೆ ಮೇಲೆ ಸಿಸಿಬಿ ದಾಳಿ
CCB attacks on gambling

By

Published : Dec 10, 2020, 12:20 PM IST

ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ‌ ನಡೆಸಿ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಕುಮಾರಸ್ವಾಮಿ, ಮಂಜುನಾಥ, ಲಕ್ಷ್ಮೀ ನಾರಾಯಣ್, ಶಿವಮೂರ್ತಿ, ಪ್ರಸಾದ್, ತಿಪ್ಪೇಸ್ವಾಮಿ ಹಾಗು ಸುರೇಶ್ ಬಂಧಿತರು. ಇವರು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸ್ ಲೇಔಟ್​​ನ ಮುಖ್ಯರಸ್ತೆಯಲ್ಲಿ ಹಣ ಪಣಕ್ಕಿಟ್ಟು ಜೂಜು ಆಡುತ್ತಿದ್ದರು ಎಂಬ ಮೊಹಿತಿ ದೊರೆತಿದೆ.

ಓದಿ: ಕಾಂಗ್ರೆಸ್ ಸದನ ಬಹಿಷ್ಕಾರ ವಿಚಾರ ನನಗೆ ಗೊತ್ತಿಲ್ಲ: ಸಿಎಂ ಯಡಿಯೂರಪ್ಪ

ಬಂಧಿತರಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ನಗದನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details