ಕರ್ನಾಟಕ

karnataka

ETV Bharat / state

ಡಿ.ಕೆ. ಸುರೇಶ್ ಮನೆಯಲ್ಲಿ ಪರಿಶೀಲನೆ ಮುಗಿಸಿದ ಸಿಬಿಐ - D.K suresj latest news

ಇಂದು ಸಿಬಿಐ ಅಧಿಕಾರಿಗಳು ಡಿ ಕೆ ಬ್ರದರ್ಸ್ ಮನೆ ಮೇಲೆ ದಾಳಿ ನಡೆಸಿದ್ದು, ಇದೀಗ ಅಧಿಕಾರಿಗಳು ಡಿ.ಕೆ ಸುರೇಶ್ ಮನೆಯಲ್ಲಿ ಪರಿಶೀಲನೆ ಮುಗಿಸಿ ಕೆಲ ದಾಖಲೆ ಸಮೇತ ಹೊರ ಬಂದಿದ್ದಾರೆ.

D.K suresh
ಡಿ.ಕೆ ಸುರೇಶ್

By

Published : Oct 5, 2020, 4:52 PM IST

ಬೆಂಗಳೂರು: ಬೆಳಗ್ಗೆಯಿಂದ ಸಿಬಿಐ ಅಧಿಕಾರಿಗಳು ಡಿ ಕೆ ಬ್ರದರ್ಸ್ ಮನೆ ಮೇಲೆ ದಾಳಿ ಮಾಡಿದ್ದು, ಸದ್ಯ ಡಿ.ಕೆ. ಸುರೇಶ್ ಮನೆಯಲ್ಲಿ ಪರಿಶೀಲನೆ ಮುಗಿಸಿದ್ದಾರೆ. ಮನೆಯಲ್ಲಿ ಎಲ್ಲಾ ದಾಖಲೆಗಳ ಪರಿಶೀಲನೆ ಮುಗಿಸಿದ ಸಿಬಿಐ ಅಧಿಕಾರಿಗಳ ತಂಡ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಹೊರ ಬಂದಿದ್ದಾರೆ.

ಸುರೇಶ್ ಮನೆಯಲ್ಲಿ ದಾಳಿ ಮುಕ್ತಾಯವಾದ ಹಿನ್ನೆಲೆ, ಅಣ್ಣ ಡಿ ಕೆ ಶಿವಕುಮಾರ್​ ಮನೆಗೆ ಸಂಸದ ಡಿ ಕೆ ಸುರೇಶ್​ ಆಗಮಿಸಿ ಸಿಬಿಐ ತನಿಖೆಯ ಬಗ್ಗೆ ಮಾಹಿತಿ ಕಲೆಹಾಕ್ತಿದ್ದಾರೆ. ಹಾಗೆ ಮತ್ತೊಂದೆಡೆ ಸುರೇಶ್ ಮನೆ ಬಳಿ ಶೋಧ ಅಂತ್ಯವಾದ ಹಿನ್ನೆಲೆ ಪ್ರತಿಭಟನೆ ಕಾವು ಮತ್ತಷ್ಟು ಜೋರಾಗಿದೆ. ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಸದ್ಯ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಡಿಕೆಶಿ ಕಚೇರಿ, ಕಾರು ಬಿಡದೇ ಮೂಲೆಮೂಲೆಗಳಲ್ಲಿ ಶೋಧ ಮುಂದುವರೆಸಿ ಬೆಳಗ್ಗೆಯಿಂದ ಸಿಕ್ಕ ಮಾಹಿತಿ ಬಗ್ಗೆ ಪಂಚನಾಮೆ ಮಾಡ್ತಿದ್ದಾರೆ. ಮನೆಯೊಳಗೆ ಅಧಿಕಾರಿಗಳ ತಲಾಷ್ ಮುಂದುವರೆದಿದೆ.

ಡಿಕೆಶಿ ಮನೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸಿಬಿಐ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ಸೂಚನೆ ಹಿನ್ನೆಲೆ ಅಲರ್ಟ್ ಆಗಿರುವ ಸ್ಥಳೀಯ ಪೊಲೀಸರು, ಅದನ್ನು ನಿಭಾಯಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ABOUT THE AUTHOR

...view details