ಕರ್ನಾಟಕ

karnataka

ETV Bharat / state

ಬ್ರಹ್ಮರಕೂಟ್ಲು ಟೋಲ್ ಮೂಲಕ ಸಾಗಿದ ಸಿದ್ಧಾರ್ಥ್​ ಕಾರು: ಸಿಸಿಟಿವಿಯಲ್ಲಿ ಸೆರೆ - SM krishna son in law

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಕಾರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್ ಮೂಲಕ ಹಾದು ಹೋಗಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ 5 ಗಂಟೆ 28 ನಿಮಿಷಕ್ಕೆ ಸರಿಯಾಗಿ ಉದ್ಯಮಿ ಸಿದ್ಧಾರ್ಥ್ ಅವರ ಕಾರು ಟೋಲ್ ಹೋಗಿದೆ.

ಉದ್ಯಮಿ ಸಿದ್ಧಾರ್ಥ್ ಅವರ ಕಾರು

By

Published : Jul 30, 2019, 5:41 PM IST

Updated : Jul 30, 2019, 5:57 PM IST

ಬೆಂಗಳೂರು/ಮಂಗಳೂರು:ನೇತ್ರಾವತಿ ನದಿ ಸೇತುವೆ ಬಳಿ ನಾಪತ್ತೆಯಾಗಿರುವ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಕಾರು ಮಂಗಳೂರು ಸಮೀಪದ ಬ್ರಹ್ಮರಕೂಟ್ಲು ಟೋಲ್ ಬಳಿ ಸಾಗಿಹೋದ ದೃಶ್ಯಗಳು ಲಭ್ಯವಾಗಿವೆ.

ಬ್ರಹ್ಮರಕೂಟ್ಲು ಟೋಲ್​ನಲ್ಲಿ ಉದ್ಯಮಿ ಸಿದ್ಧಾರ್ಥ್ ಅವರ ಕಾರು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್​ ಬಳಿಯ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಯಲ್ಲಿರುವಂತೆ ನಿನ್ನೆ ಸಂಜೆ 5 ಗಂಟೆ 28 ನಿಮಿಷಕ್ಕೆ ಸರಿಯಾಗಿ ಸಿದ್ಧಾರ್ಥ್​ ಕಾರು ಬ್ರಹ್ಮರಕೂಟ್ಲು ಟೋಲ್ ಮೂಲಕ ಹಾದುಹೋಗಿದೆ.

ಬ್ರಹ್ಮರಕೂಟ್ಲು ಟೋಲ್​ ಮಂಗಳೂರಿನ ಸಮೀಪದಲ್ಲೇ ಇದೆ. ಸದ್ಯ ನದಿ ಬಳಿ ಸಿದ್ದಾರ್ಥ್​ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Last Updated : Jul 30, 2019, 5:57 PM IST

ABOUT THE AUTHOR

...view details