ಕರ್ನಾಟಕ

karnataka

ETV Bharat / state

ಬೈ ಎಲೆಕ್ಷನ್ ಬಿಸಿ: ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟ ಖಾಕಿ

ರಾಜ್ಯದಲ್ಲಿ ಉಪಚುನಾವಣೆ ಬಿಸಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ವಹಿಸಿದ ಪೊಲೀಸ್​ ಇಲಾಖೆ, ರೌಡಿಗಳ ಪೆರೇಡ್​ ನಡೆಸಿ ಎಚ್ಚರಿಕೆ ನೀಡಿದೆ.

ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು

By

Published : Nov 23, 2019, 9:43 PM IST

ಬೆಂಗಳೂರು:ರಾಜಧಾನಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಪೊಲೀಸರು ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಸಮರ ನಡೆಯುತ್ತಿದ್ದು, ಈ ವೇಳೆ ಯಾವುದೇ ಹಿಂಸಾಚಾರ ನಡೆಯದಂತೆ ಸಕಲ ರೀತಿಯಿಂದಲೂ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಶಿವಾಜಿನಗರ,‌ ಕೆ.ಆರ್.ಪುರ ಭಾಗದ ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಹಿಂಸಾಚಾರ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂಬ ಅನುಮಾನದಿಂದ ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ‌.

ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕೆಲ ರೌಡಿಗಳು ಜೈಲಿನಲ್ಲಿದ್ದರೆ, ಇನ್ನು ಕೆಲವರು ಹೊರಗಿದ್ದಾರೆ. ಕ್ರಿಯಾಶೀಲರಾಗಿರುವ ರೌಡಿಗಳ ಪಟ್ಟಿ ಮಾಡಿಕೊಂಡಿರುವ ಪೊಲೀಸರು, ಈಗಾಗಲೇ ಪೊಲೀಸ್ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳುಮಾಡುವ ರೌಡಿಗಳನ್ನು ಚುನಾವಣೆ ಮುಗಿಯುವವರೆಗೂ ಗಡಿಪಾರು ಮಾಡುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ

ABOUT THE AUTHOR

...view details