ಕರ್ನಾಟಕ

karnataka

ETV Bharat / state

ಇನ್ನೂ ಮಠದಲ್ಲೇ ಇದ್ದೀರಾ... ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಯಾಕೆ ಹೋಗಿಲ್ಲ: ಸೋಮಣ್ಣಗೆ ಬಿಎಸ್​ವೈ ಪ್ರಶ್ನೆ - ವಿ.ಸೋಮಣ್ಣ

ವಿ.ಸೋಮಣ್ಣ ಮಧ್ಯಾಹ್ನವಾದರೂ ಮಠದಲ್ಲೇ ಇದ್ದ ಕಾರಣ ನೆರೆ ಹಾಗೂ ಬರ ಪೀಡಿತ ಜಿಲ್ಲೆಗಳಿಗೆ ಹೋಗಬೇಕಾದ ಜವಾಬ್ದಾರಿ ಇದ್ದರೂ ಮಠದಲ್ಲೇ ಏನು ಮಾಡುತ್ತಿದ್ದೀರಾ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ವಿ.ಸೋಮಣ್ಣಗೆ ಪ್ರಶ್ನಿಸಿದರು.

ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಿಜೆಪಿ ಪಡೆ

By

Published : Aug 21, 2019, 1:33 PM IST

ಬೆಂಗಳೂರು: ಇಂದು ಮುಂಜಾನೆಯಿಂದಲೇ ಬಿಜೆಪಿಯ ನೂತನ ಸಚಿವರು ಒಬ್ಬೊಬ್ಬರಾಗಿಯೇ ವಿಜಯನಗರದ ಆದಿಚುಂಚನಗಿರಿ ಮಠದ ಶಾಖೆಯಲ್ಲಿ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಿಜೆಪಿ ಪಡೆ

ಸೋಮಣ್ಣ ಮಧ್ಯಾಹ್ನವಾದರೂ ಮಠದಲ್ಲೇ ಇದ್ದ ಕಾರಣ ನೆರೆ ಹಾಗೂ ಬರ ಪೀಡಿತ ಜಿಲ್ಲೆಗಳಿಗೆ ಹೋಗಬೇಕಾದ ಜವಾಬ್ದಾರಿ ಇದ್ದರೂ ಮಠದಲ್ಲೇ ಏನು ಮಾಡುತ್ತಿದ್ದೀರಾ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ವಿ.ಸೋಮಣ್ಣಗೆ ಪ್ರಶ್ನಿಸಿದರು.

ಬೆಳಗ್ಗೆ ಮೊದಲನೇಯದಾಗಿ ವಿ.ಸೋಮಣ್ಣ, ಡಾ. ಅಶ್ವಥ್ ನಾರಾಯಣ್, ನಂತರ ಆರ್.ಅಶೋಕ್ ಬಂದು ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ಬಿಎಸ್​​ವೈ ಮಠಕ್ಕೆ ಭೇಟಿ ನೀಡುವ ವಿಚಾರ ತಿಳಿದು ವಾಪಾಸು ಹೋಗಿದ್ದ ಸಚಿವರು ಪುನಃ ಮಠಕ್ಕೆ ಬಂದರು.

ಸಿಎಂ ಬಿಎಸ್​​ವೈ ಮಠದಿಂದ ಗೃಹ ಕಚೇರಿ ಕೃಷ್ಣಾಕ್ಕೆ ಹೊರಡುವ ಸಮಯದಲ್ಲಿ ಆರ್.ಆಶೋಕ್ ಹಾಗೂ ವಿ.ಸೋಮಣ್ಣ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಸೋಮಣ್ಣ, ನನಗೆ ನೆರೆ ಪೀಡಿತ ಐದು ಹಳ್ಳಿಗಳ ವೀಕ್ಷಣೆಗೆ ಹೇಳಿದ್ದಾರೆ. ಆರ್.ಅಶೋಕ್​ಗೆ ನಾಲ್ಕು ಹಳ್ಳಿಗಳ ಉಸ್ತುವಾರಿ ನೋಡಿಕೊಳ್ಳಲು ಹೇಳಿದ್ದಾರೆ ಎಂದರು.

ಮತ್ತೆ ಇನ್ನೂ ಇಲ್ಲೇನು ಮಾಡುತ್ತಿದ್ದೀರಿ ಎಂದು ಬಿಎಸ್​​ವೈ ಕೇಳಿದಾಗ ನಾಳೆ ಬೆಳಗ್ಗೆನೇ ಎದ್ದು ಹೋಗಿ, ಸಂಜೆ ವಾಪಾಸ್ಸು ಆಗ್ತೇವೆ ಎಂದು ಸೋಮಣ್ಣ ಉತ್ತರಿಸಿದ್ದಾರೆ.
ಇದಕ್ಕೆ ನಗು ನಗುತ್ತಲೇ ಆಯ್ತು ಆಯ್ತು ಎಂದು ಸಿಎಂ ವಾಪಸ್​ ತೆರಳಿದ್ದಾರೆ.

ABOUT THE AUTHOR

...view details