ಕರ್ನಾಟಕ

karnataka

ETV Bharat / state

ಇಂದೇ ಬಿಎಸ್​ವೈ ಪ್ರಮಾಣ ವಚನ...! ಅಮಿತ್ ಶಾ ಗ್ರೀನ್​ ಸಿಗ್ನಲ್​​ - ಬಿಎಸ್​ವೈ

10 ಗಂಟೆಗೆ ರಾಜ್ಯಪಾಲರ ಭೇಟಿ ಮಾಡಲಿರುವ ಬಿಎಸ್​ವೈ ಸರ್ಕಾರ ರಚನೆಗೆ ಅನುಮತಿ ಕೇಳಲಿದ್ದಾರೆ. ಈ ವಿಷಯವನ್ನು ಬಿಎಸ್​ವೈ ಪ್ರಕಟಿಸಿದ್ದಾರೆ.

ಬಿಎಸ್​ವೈ

By

Published : Jul 26, 2019, 9:56 AM IST

Updated : Jul 26, 2019, 10:22 AM IST

ಬೆಂಗಳೂರು:ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಇಂದೇ ಬಿ.ಎಸ್​ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದಕ್ಕೂ ಮೊದಲು 10 ಗಂಟೆಗೆ ರಾಜ್ಯಪಾಲರ ಭೇಟಿ ಮಾಡಲಿರುವ ಬಿಎಸ್​ವೈ ಸರ್ಕಾರ ರಚನೆಗೆ ಅನುಮತಿ ಕೇಳಲಿದ್ದಾರೆ. ಈ ವಿಷಯವನ್ನು ಬಿಎಸ್​ವೈ ಪ್ರಕಟಿಸಿದ್ದಾರೆ.

ಇಂದು ಬೆಳಗ್ಗೆ ಯಡಿಯೂರಪ್ಪ ನಿವಾಸಕ್ಕೆ ಎರಡು ಟಿಟಿಗಳಲ್ಲಿ ಆಗಮಿಸಿದ ಕಲಬುರ್ಗಿಯಿಂದ ರೈತರು ಸಾಲ‌ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಯಡಿಯೂರಪ್ಪ ಮಾತು

ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್​ವೈ ಧವಳಗಿರಿಗೆ ನಿವಾಸಕ್ಕೆ ರೈತರು ಆಗಮಿಸಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಸರ್ಕಾರದಿಂದ ರೈತರ ಸಾಲ‌ಮನ್ನಾ ಆಗಿದೆ ಅಂದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸಣ್ಣ ರೈತರಿಗೆ ಸಾಲ‌ಮನ್ನಾ ಸೌಲಭ್ಯ ಸಿಗಲೇ ಇಲ್ಲ. ನೀವು ಮುಖ್ಯಮಂತ್ರಿಯಾದ ನಂತರ ಸಾಲ ಮನ್ನಾ ಮಾಡಿ ಎಂದು ರೈತರು ಕೇಳಿಕೊಂಡಿದ್ದಾರೆ.

ಹಾಗೇ ನೂತನವಾಗಿ ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪಗೆ ರೈತರು ಶುಭಾಶಯ ತಿಳಿಸಿದ್ದಾರೆ.

Last Updated : Jul 26, 2019, 10:22 AM IST

ABOUT THE AUTHOR

...view details