ಬೆಂಗಳೂರು:ರೈಲಿನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾದ ಘಟನೆ ಬೈಯ್ಯಪ್ಪನಹಳ್ಳಿ ರೈಲ್ವೇ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಜಿಎಫ್‌ನಿಂದ ಬೆಂಗಳೂರಿಗೆ ಬಂದ ರೈಲಿನಲ್ಲಿ ಬೆಡ್ ಶೀಟ್, ಬಟ್ಟೆಗಳ ನಡುವೆ ಮೃತದೇಹ ತುರುಕಿ ಚೀಲದೊಳಗೆ ಇರಿಸಲಾಗಿದೆ. ಪ್ರಯಾಣಿಕರು ಖಾಲಿಯಾದರೂ ಚೀಲ ಉಳಿದುಕೊಂಡಿದ್ದರಿಂದ ರೈಲು ಸಿಬ್ಬಂದಿ ಅನುಮಾನಗೊಂಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ರೈಲಿನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ; ಕೊಲೆ ಶಂಕೆ - ETv Bharat Kannada news
ಮಹಿಳೆಯನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರೈಲಿನಲ್ಲಿ ಬಿಸಾಕಿರುವ ಅನುಮಾನ ವ್ಯಕ್ತವಾಗಿದೆ.
ರೈಲಿನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಸುಮಾರು ಮೂವತ್ತು ವರ್ಷ ಆಸುಪಾಸಿನ ಮಹಿಳೆಯ ಮೃತದೇಹ ದೊರೆತಿದೆ. ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರೈಲಿನಲ್ಲಿ ಬಿಸಾಕಿರುವ ಅನುಮಾನ ವ್ಯಕ್ತವಾಗಿದ್ದು ಮೃತ ಮಹಿಳೆ ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹದ ಗುರುತು ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ನೆಲಮಂಗಲ: ಕೆರೆಗೆಸೆದ ಸೂಟ್‌ಕೇಸ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ