ಬೆಂಗಳೂರು :ವಿಧಾನಪರಿಷತ್ಗೆ ಐವರು ಸದಸ್ಯರ ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಪಟ್ಟಿ ಅಂತಿಮಗೊಂಡಿದ್ದು, ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ.
ಹೆಚ್.ವಿಶ್ವನಾಥ್ (ಸಾಹಿತ್ಯ), ಸಾಬಣ್ಣ ತಳವಾರ್ (ಶಿಕ್ಷಣ), ಶಾಂತಾರಾಮ ಸಿದ್ದಿ (ಬುಡಕಟ್ಟು ಜನಾಂಗ), ಭಾರತಿ ಶೆಟ್ಟಿ (ಸಮಾಜಸೇವೆ) ಹಾಗೂ ಸಿ ಪಿ ಯೊಗೇಶ್ವರ್ (ಸಿನಿಮಾ) ಅಂತಿಮವಾಗಿ ಆಯ್ಕೆಯಾಗಿದ್ದಾರೆ.