ಬೆಂಗಳೂರು:ರಾಜ್ಯ ಸರ್ಕಾರ ಉಚಿತವಾಗಿ ಬಡವರಿಗೆ ನೀಡುತ್ತಿರುವ ಹಾಲು, ದಿನಸಿ ಕಿಟ್ಗಳು ಬಡವರಿಗೆ ತಲುಪುತ್ತಿಲ್ಲ. ಬದಲಾಗಿ ರಾಜಕೀಯ ಮುಖಂಡರು ತಮ್ಮ ತಮ್ಮ ವೋಟ್ ಬ್ಯಾಂಕ್ಗಾಗಿ ಬಳಸಿಕೊಂಡು ಅನುಕೂಲಸ್ಥರಿಗೂ ಹಂಚುತ್ತಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಕೀಳು ರಾಜಕಾರಣ ಆರೋಪ - ಕೊರೊನಾ ಸಂಕಷ್ಟದಲ್ಲೂ ಕೀಳು ರಾಜಕಾರಣ
ಕೊರೊನಾ ಹಿನ್ನೆಲೆಯಲ್ಲಿ ಬಡವರಿಗಾಗಿ ಉಚಿತವಾಗಿ ದಿನಸಿ ಕಿಟ್ಗಳನ್ನು ವಿತರಣೆ ಮಾಡುತ್ತಿದ್ದು, ಇದರಲ್ಲಿ ಕೆಲ ರಾಜಕೀಯ ಮುಖಂಡರು ತಮ್ಮ ತಮ್ಮ ವೋಟ್ ಬ್ಯಾಂಕ್ಗಾಗಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ.
ಈ ಸಂಬಂಧ ಗಾಯತ್ರಿ ನಗರ ವಾರ್ಡ್ ಕಾರ್ಪೋರೇಟರ್ ಚಂದ್ರಕಲಾ ಗಿರೀಶ್ ಲಕ್ಕಣ್ಣ ಮಾತನಾಡಿದ್ದು, ನಮ್ಮ ವಾರ್ಡ್ಗೆ ಉಚಿತ ಹಾಲು ಪೂರೈಕೆ ಆಗುತ್ತಿರಲಿಲ್ಲ. ಅಧಿಕಾರಿಗಳ ಬಳಿ ಕೇಳಿದಾಗ ಕೊಡಲು ಆರಂಭಿಸುತ್ತೇವೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕರು ಹಾಗೂ ಡಿಸಿಎಂಗಳು ತಮ್ಮ ಕಾರ್ಯಕರ್ತರೇ ಹಾಲು ಹಂಚುತ್ತಾರೆ ಎಂದು ಹೇಳಿದ್ದಾರೆ.
ಆದರೆ ಸರ್ಕಾರದಿಂದ ಕೊಡುತ್ತಿರುವ ಸೌಲಭ್ಯಗಳು ತಲುಪಬೇಕಾದ ಜನಕ್ಕೆ ತಲುಪುತ್ತಿಲ್ಲ. ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳತ್ತಿದ್ದಾರೆ. ಈ ಕುರಿತು ಆಯುಕ್ತರು, ಜಂಟಿ ಆಯುಕ್ತರಿಗೂ ದೂರು ಕೊಡಲಾಗಿದೆ. ಆದರೆ ಅವರೂ ಸರಿಯಾಗಿ ಸ್ಪಂದಿಸಿಲ್ಲ. ಬಡವರಿಗೆ, ನಿರ್ಗತಿಕರಿಗೆ ಹಾಲು, ಪಡಿತರ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.