ಕರ್ನಾಟಕ

karnataka

ETV Bharat / state

ಬಿಜೆಪಿ ಕೋರ್​​ ಕಮಿಟಿ ಸಭೆ ಆರಂಭ... ಕಮಲ ಸ್ಫರ್ಧಿಗಳು ಇಂದೇ ಅಂತಿಮ..?

ಬಿಜೆಪಿ‌ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ‌ ಸಭೆ ಸದ್ಯ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದು, ರಾಜ್ಯದಿಂದ ಶಿಫಾರಸು ಮಾಡಬೇಕಿರುವ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತಿದೆ.

By

Published : Mar 17, 2019, 1:22 PM IST

ಬಿಜೆಪಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿರುವ ಬಿಜೆಪಿ ಇಂದು ಹೈಕಮಾಂಡ್​​ಗೆ ಪಟ್ಟಿಯನ್ನು ಕಳುಹಿಸಿಕೊಡಲಿದೆ. 12.30 ಕ್ಕೆ ನಿಗದಿಯಾಗಿದ್ದ ಕೋರ್ ಕಮಿಟಿ ಸಭೆ ಅವಧಿಗೆ ಮುನ್ನವೇ ಆರಂಭಗೊಂಡಿದ್ದು,ಕೋರ್ ಕಮಿಟಿ ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ.

ಬಿಜೆಪಿ‌ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ‌ ಸಭೆ ಸದ್ಯ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದು, ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತಿದೆ.

ಕೋರ್ ಕಮಿಟಿ ಸಭೆಯಲ್ಲಿ ಚರ್ಚಿತವಾದ ಅಭ್ಯರ್ಥಿಗಳ ಪಟ್ಟಿ ಈಟಿವಿ ಭಾರತ್ ಗೆ ಲಭ್ಯವಾಗಿದ್ದು ಬಹುತೇಕ ಇದೇ ಪಟ್ಟಿಯನ್ನು ರಾಜ್ಯದ ನಾಯಕರು ಹೈಕಮಾಂಡ್​ಗೆ ಕಳುಹಿಸಿ ಕೊಡಲಿದ್ದಾರೆ.

ಶಿಫಾರಸ್ಸು ಮಾಡಲಿರುವ ಅಭ್ಯರ್ಥಿಗಳ ಹೆಸರು:





ಚಿಕ್ಕೋಡಿ- ರಮೇಶ್ ಕತ್ತಿ, ಪ್ರಭಾಕರ್ ಕೋರೆ

ಬೆಳಗಾವಿ- ಸುರೇಶ್ ಅಂಗಡಿ

ಬಾಗಲಕೋಟೆ- ಪಿ.ಸಿ ಗದ್ದಿಗೌಡರ್

ವಿಜಯಪುರ- ರಮೇಶ್ ಜಿಗಜಿಣಗಿ

ಕಲಬುರಗಿ- ಉಮೇಶ್ ಜಾದವ್

ರಾಯಚೂರು- ತಿಪ್ಪರಾಜ ಹವಾಲ್ದಾರ್
,ಅಮರೇಶ್ ನಾಯಕ್, ಪಕ್ಕೀರಪ್ಪ

ಬೀದರ್- ಭಗವಂತ ಖೂಬಾ

ಕೊಪ್ಪಳ- ಕರಡಿ ಸಂಗಣ್ಣ

ಬಳ್ಳಾರಿ- ದೇವೆಂದ್ರಪ್ಪ, ವೆಂಕಟೇಶ ಪ್ರಸಾದ್

ಹಾವೇರಿ- ಶಿವಕುಮಾರ ಉದಾಸಿ

ಧಾರವಾಡ- ಪ್ರಹ್ಲಾದ ಜೋಷಿ

ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ

ದಾವಣಗೆರೆ- ಜಿ.ಎಂ ಸಿದ್ದೇಶ್ವರ್

ಶಿವಮೊಗ್ಗ- ಬಿ.ವೈ ರಾಘವೇಂದ್ರ

ಉಡುಪಿ - ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ

ಹಾಸನ - ಎ.ಮಂಜು

ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್

ಚಿತ್ರದುರ್ಗ- ಆನೇಕಲ್ ನಾರಾಯಣ ಸ್ವಾಮಿ, ಜನಾರ್ದನ್ ಸ್ವಾಮಿ, ಮಾನಪ್ಪ ವಜ್ಜಲ್

ತುಮಕೂರು- ಜಿ.ಎಸ್. ಬಸವರಾಜು

ಮಂಡ್ಯ- ಸಿದ್ರಾಮಯ್ಯ( ಅಥವಾ ನೋ ಕ್ಯಾಂಡಿಡೇಟ್)

ಸುಮಲತಾಗೆ ಬೆಂಬಲ ನೀಡುವ ವಿಚಾರವನ್ನ ಹೈಕಮಾಂಡ್‌ಗೆ ಮನವಿ ಮಾಡಲಿರುವ ಬಿಜೆಪಿ.

ಅಂತಿಮ ನಿರ್ಧಾರ ಹೈಕಮಾಂಡ್ ಬಿಟ್ಟ ರಾಜ್ಯ ನಾಯಕರು.

ಮೈಸೂರು- ಪ್ರತಾಪ್ ಸಿಂಹ

ಚಾಮರಾಜನಗರ - ವಿ. ಶ್ರೀನಿವಾಸ್ ಪ್ರಸಾದ್

ಬೆಂಗಳೂರು ಗ್ರಾಮಾಂತರ- ಸಿ.ಪಿ ಯೋಗೇಶ್ವರ್, ರುದ್ರೇಶ್

ಬೆಂಗಳೂರು ಉತ್ತರ- ಡಿ. ವಿ ಸದಾನಂದಗೌಡ

ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್

ಬೆಂಗಳೂರು ದಕ್ಷಿಣ- ತೇಜಸ್ವಿನಿ ಅನಂತ್ ಕುಮಾರ್,

ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ

ಕೋಲಾರ- ಡಿ.ಎಸ್ ವೀರಯ್ಯ/ಚಿ.ನಾ ರಾಮು.

ಗೊಂದಲ‌ ಇರುವ ಕ್ಷೇತ್ರಗಳಲ್ಲಿ ಎರಡ್ಮೂರು‌ ಹೆಸರು ಶಿಫಾರಸ್ಸು ಮಾಡಿದ್ದು, ಅಂತಿಮ ನಿರ್ಧಾರ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ನಾಯಕರು ಬಿಟ್ಟಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಗೆ ಶಿಫಾರಸು ಮಾಡಲು ಯಡಿಯೂರಪ್ಪ ಸಿದ್ದಗೊಳಿಸಿರೋ ಪಟ್ಟಿಗೆ ಕೋರ್ ಕಮಿಟಿ ಸಮ್ಮತಿ ನೀಡಿದ್ದು ಇಂದು ಸಂಜೆ ರಾಜ್ಯ ಬಿಜೆಪಿಯಿಂದ ಅಧಿಕೃತ ಪಟ್ಟಿ ಹೈಕಮಾಂಡ್ ಗೆ ರವಾನೆ‌ಯಾಗಲಿದೆ ಇಂದು ರಾತ್ರಿ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿರೋ ಯಡಿಯೂರಪ್ಪ ಪಟ್ಟಿಯನ್ನು ಅಮಿತ್ ಶಾ ಗೆ ನೀಡಲಿದ್ದು ನಾಳೆ ಸಂಸದೀಯ ಮಂಡಳ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.

ABOUT THE AUTHOR

...view details