ಕರ್ನಾಟಕ

karnataka

ETV Bharat / state

ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ - ಸಿಎಂ ಬೊಮ್ಮಾಯಿ

ಜಗದೀಶ್ ಶೆಟ್ಟರ್ ಸಭೆ ಇತ್ಯಾದಿಗಳೆಲ್ಲದರ ಬಗ್ಗೆಯೂ ಗೊತ್ತಿದೆ. ನಾಳೆ ನಾಡಿದ್ದರಲ್ಲಿ ಮೂರನೇ ಪಟ್ಟಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

By

Published : Apr 15, 2023, 7:07 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌..

ಬೆಂಗಳೂರು: ಚುನಾವಣಾ ‌ನಿರ್ವಹಣಾ ಸಮಿತಿ ಸಭೆ ನಡೆಸಿದ್ದೇವೆ. ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಸಚಿವರ ಪ್ರವಾಸಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ 20 ದಿನಗಳ ರೂಪುರೇಷೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಮುಖರ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿ, ವರಿಷ್ಠರ ರಾಜ್ಯ ಪ್ರವಾಸ, ಸಮಾವೇಶಗಳ ಆಯೋಜನೆ ಸೇರಿದಂತೆ ಮೇ 8 ರವರೆಗೆ ನಡೆಸಬೇಕಿರುವ ಪ್ರಚಾರ ಕಾರ್ಯದ ಕುರಿತು ಚರ್ಚಿಸಿದರು. ಟಿಕೆಟ್ ವಂಚಿತರ ಪಕ್ಷಾಂತರದ ಪರಿಣಾಮ, ಮನವೊಲಿಕೆ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ‌ "ಪ್ರಧಾನಿ ಮಂತ್ರಿ, ಅಮಿತ್ ಶಾ ಹಾಗೂ ಅನೇಕ ರಾಷ್ಟ್ರೀಯ ನಾಯಕರ ಪ್ರವಾಸದ ಬಗ್ಗೆ ಚರ್ಚೆ ಮಾಡಿದ್ದೇವೆ, ನಾಮಿನೇಷನ್ ಸಂದರ್ಭದಲ್ಲಿ ಯಾರೆಲ್ಲ ಎಲ್ಲಿ ಇರಬೇಕು, ಅವರ ಜೊತೆಗೆ ಯಾರ್ಯಾರು ಬೇಕು, ಕ್ಷೇತ್ರವಾರು ಏನಲ್ಲ ಆಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಇರುವಂತ ಎಲ್ಲ ಅಭ್ಯರ್ಥಿಗಳ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಸುದೀರ್ಘ 20 ದಿನಗಳ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ" ಎಂದರು.

ಮೂರನೇ ಪಟ್ಟಿ ಬಿಡುಗಡೆ ಹಿನ್ನೆಲೆ ಜಗದೀಶ್ ಶೆಟ್ಟರ್ ಟಿಕೆಟ್ ನಿರೀಕ್ಷೆ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, "ಜಗದೀಶ್ ಶೆಟ್ಟರ್ ಸಭೆ ಇತ್ಯಾದಿಗಳೆಲ್ಲದರ ಬಗ್ಗೆಯೂ ಗೊತ್ತಿದೆ. ನಾಳೆ ನಾಡಿದ್ದರಲ್ಲಿ ಮೂರನೇ ಪಟ್ಟಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈ ವೇಳೆ, ನಾನು ಸತ್ತರೂ ನನ್ನ ಹೆಣ ಬಿಜೆಪಿ ಆಫೀಸ್​​ಗೆ ಹೋಗಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಅವರು ಸ್ವಲ್ಪ ಎಮೋಷನ್ ಆಗಿದ್ದಾರೆ ಎಂದರು.

ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಭಾಗಿಯಾಗಿದ್ದರು.

ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ: ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಈಗಲೂ ಆಶಾಭಾವ ಹೊಂದಿದ್ದೇನೆ. ಇವತ್ತಿಗೆ ಎರಡು ದಿನ ಆಯ್ತು. ನಾಳೆ ಟಿಕೆಟ್​ ಘೋಷಣೆ ಆಗದೇ ಹೋದರೆ ನಾನು ಯೋಚನೆ ಮಾಡ್ತೀನಿ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇನೆ'' ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ''ಶನಿವಾರ ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ. ವರಿಷ್ಠರನ್ನು ಭೇಟಿ ಮಾಡಿದಾಗ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ. ಶನಿವಾರ 11 ಗಂಟೆವರೆಗೂ ನೋಡ್ತೀನಿ. ನಂತರ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ‌. ಬೇರೆ ಜಿಲ್ಲೆಯಿಂದಲೂ ಜನ‌ ಬರುತ್ತಿದ್ದಾರೆ. ಎಲ್ಲರಿಗೂ ಜಗದೀಶ್ ಶೆಟ್ಟರ್​​ಗೆ ಅಪಮಾನ ಆಗಿದೆ ಅಂತಿದಾರೆ'' ಎಂದು ಹೇಳಿದರು.

ಇದನ್ನೂ ಓದಿ:ನಾಳೆ ಟಿಕೆಟ್​ ಘೋಷಣೆ ಆಗದೇ ಹೋದ್ರೆ​, ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ: ಶೆಟ್ಟರ್ ಎಚ್ಚರಿಕೆ

ABOUT THE AUTHOR

...view details