ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ 89 ಕೋಟಿ ರೂ.ಗಳ ಆಸ್ತಿ ಘೋಷಣೆ ಮಾಡಿಕೊಂಡಿದ್ದು 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಆಸ್ತಿ ವಿವರ ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ಒಟ್ಟು 89,13,47,877 ಮೌಲ್ಯದ ಆಸ್ತಿ ಹೊಂದಿದ್ದಾರೆ. 62,61,34,400 ಮೌಲ್ಯದ ಸ್ಥಿರಾಸ್ತಿ, 26,52,13,477 ಮೌಲ್ಯದ ಚರಾಸ್ತಿ ಹೊಂದಿದ್ದು,1,23,99,000 ಮೌಲ್ಯದ ಚಿನ್ನಾಭರಣ, 3,930 ಗ್ರಾಂ ಚಿನ್ನ, 40.94 ಕೆ.ಜಿ ಬೆಳ್ಳಿ, ಪತ್ನಿ ಹೆಸರಲ್ಲಿ 4,40,000 ರೂ. ಮೌಲ್ಯದ 360 ಗ್ರಾಂ ಚಿನ್ನ ಹೊಂದಿರುವ ಬಗ್ಗೆ ವಿವರ ಸಲ್ಲಿಕೆ ಮಾಡಿದ್ದಾರೆ. ಮುನಿರತ್ನ ಹೆಸರಲ್ಲಿ 111.27 ಕ್ಯಾರೆಟ್ ಡೈಮಂಡ್ ಇದ್ದು, 1,31,68,666 ಮೌಲ್ಯದ ವಾಹನ ಹೊಂದಿದ್ದಾರೆ.
46 ಕೋಟಿ ಸಾಲ:ಕುರುಕ್ಷೇತ್ರ ಸಿನಿಮಾ ನಿರ್ಮಾಣ ಮಾಡಿದ್ದ ಮುನಿರತ್ನ ಅದರಿಂದ ಬಂದ ಆದಾಯ, ಹೂಡಿಕೆಗಳ ಬಗ್ಗೆ ಮಾಹಿತಿ ನೀಡಿದ್ದು, ಸಾಲದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಪತ್ನಿಯ ಹೆಸರಲ್ಲಿ 4.38 ಕೋಟಿ ಸೇರಿ ಒಟ್ಟು 46,42,61,785 ರೂ. ಸಾಲವಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಆಸ್ತಿ ವಿವರ ಮುನಿರತ್ನ ವಿರುದ್ಧ 5 ಕ್ರಿಮಿನಲ್ ಕೇಸ್:ನಾಮಪತ್ರದ ಜೊತೆ ಸಲ್ಲಿಸಿದ ಆಸ್ತಿ ವಿವರ ಹಾಗೂ ಇತರೆ ವಿಚಾರಗಳ ಪ್ರಸ್ತಾಪ ಮಾಡಿರುವ ಮುನಿರತ್ನ ತಮ್ಮ ವಿವರದಲ್ಲಿ 5 ಕ್ರಿಮಿನಲ್ ಕೇಸ್ಗಳು ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 2018ರ ಚುನಾವಣೆಯಲ್ಲಿ 43 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಮುನಿರತ್ನ ಈ ಬಾರಿ 89 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಕೇವಲ ಒಂದೂವರೆ ವರ್ಷದಲ್ಲೇ ಆಸ್ತಿಯಲ್ಲಿ ಭಾರಿ ಹೆಚ್ಚಳವಾಗಿದೆ.