ಬೆಂಗಳೂರು:ಬಿಟ್ ಕಾಯಿನ್ ಹಗರಣ(Bitcoin scam)ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಲೆದಂಡವಾಗಲಿದೆ ಎನ್ನುವುದು ಕೇವಲ ಊಹಾಪೋಹ. ಅಧಿಕಾರ ಕಳೆದುಕೊಂಡು ರಾಜಕೀಯ ನಿರುದ್ಯೋಗಿಗಳಾಗಿರುವ ಕೆಲವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರರು ವಾಗ್ದಾಳಿ ನಡೆಸಿದ್ದಾರೆ.
ಅವಧಿಗೂ ಮುನ್ನ ನಳಿನ್ ಕುಮಾರ್ ಕಟೀಲ್ ಬದಲಾವಣೆ ಇಲ್ಲ: ಬಿಜೆಪಿ ಸ್ಪಷ್ಟನೆ - ಬಿಟ್ ಕಾಯಿನ್ ಹಗರಣ
ಬಿಟ್ ಕಾಯಿನ್ ಹಗರಣ(Bitcoin scam)ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಲೆದಂಡವಾಗಲಿದೆ ಎನ್ನುವುದು ಕೇವಲ ಊಹಾಪೋಹ. ಅಧಿಕಾರ ಮುಗಿಯುವ ಮುನ್ನವೇ ಕಟೀಲ್ ಬದಲಾವಣೆ ಇಲ್ಲವೆಂದು ಬಿಜೆಪಿ ಸ್ಪಷ್ಟಪಡಿಸಿದೆ.
ಕಟೀಲ್ ಬದಲಾವಣೆ ಕುರಿತ ಹೇಳಿಕೆಗಳ ಕುರಿತು ವಿವರಣೆ ನೀಡಿದ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್, ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರು ಬದಲಾಗಲಿದ್ದಾರೆ ಎಂಬ ಹೇಳಿಕೆಗಳು ಬರುತ್ತಿವೆ. ಬಹಳ ದಿನಗಳಿಂದ ಈ ರೀತಿಯ ಮಾತುಕತೆ ನಡೆಯುತ್ತಿದೆ. ಅಧಿಕಾರ ಕಳೆದುಕೊಂಡ ಮೇಲೆ ಕೆಲವರು ನಿರುದ್ಯೋಗಿಗಳಾಗಿದ್ದು, ಅವರು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ನಮ್ಮ ಪಕ್ಷದ ನಿಯಮದಂತೆ ಅಧ್ಯಕ್ಷರನ್ನು ಮೂರು ವರ್ಷದ ಅವಧಿಗೆ ಚುನಾಯಿಸಲಾಗುತ್ತದೆ. ಬೇರೆ ಪಕ್ಷದ ರೀತಿ ಶಾಶ್ವತವಾಗಿ ಆಯ್ಕೆ ಮಾಡುವುದಿಲ್ಲ. ಯಾವಾಗ ಅವಧಿ ಮುಗಿಯುತ್ತದೆಯೋ ಆಗ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಅನ್ವಯವೇ ಎಲ್ಲವೂ ಆಗುತ್ತದೆ. ಈಗ ಅಧ್ಯಕ್ಷರ ಬದಲಾವಣೆ ಇಲ್ಲ, ನಮ್ಮ ರಾಜ್ಯ ಉಸ್ತುವಾರಿಗಳು ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.