ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳರ ಹಾವಳಿ ದಿನೇ-ದಿನೆ ಹೆಚ್ಚಾಗುತ್ತಿದೆ. ಏರಿಯಾಗಳಲ್ಲಿ ಸಿಸಿಟಿವಿ ಇದ್ರೂ ಕೂಡ ಯಾವುದೇ ಭಯವಿಲ್ಲದಂತೆ ಎಂಟ್ರಿ ಕೊಡುತ್ತಿರುವ ಕಳ್ಳರು ಬೈಕ್ ಕಳ್ಳತನ ಮಾಡುತ್ತಿದ್ದಾರೆ.
ಸದ್ಯ ಹೆಚ್ಎಸ್ಆರ್ ಲೇಔಟ್ ಬಳಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಬೈಕ್ ಕದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಖತರ್ನಾಕ್ ಕಳ್ಳ 1 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿ ಮನೆಗೆ ಬಂದಿದ್ದಾನೆ. ಮನೆಗೆ ಬರುತ್ತಿದ್ದಂತೆ ತನ್ನ ಸಹಚರನನ್ನು ಕರೆಸಿಕೊಂಡು ಮತ್ತೊಂದು ಬೈಕ್ ಕದ್ದಿದ್ದಾನೆ ಎನ್ನಲಾಗ್ತಿದೆ.