ಕರ್ನಾಟಕ

karnataka

ETV Bharat / state

ಬೈಕ್ ಸವಾರರೇ ರೋಡಿಗಿಳಿಯುವ ಮುನ್ನ ಯೋಚಿಸಿ... 900 ಬೈಕ್​ಗಳನ್ನು ವಶಕ್ಕೆ ಪಡೆದ ಪೊಲೀಸರು - Bike riders careful

ಭಾನುವಾರ ರಸ್ತೆಗಿಳಿದ ಸುಮಾರು 900ಕ್ಕೂ ಹೆಚ್ಚು ಬೈಕ್​ಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್ ಸವಾರರೇ ಎಚ್ಚರ !
ಬೈಕ್ ಸವಾರರೇ ಎಚ್ಚರ !

By

Published : Mar 29, 2020, 9:58 PM IST

ಬೆಂಗಳೂರು:ರಸ್ತೆ ಖಾಲಿ ಇದೆ ಎಂದು ರೋಡಿಗೆ ಬಂದಿದ್ದ 900ಕ್ಕಿಂತ ಹೆಚ್ಚು ಬೈಕ್​ಗಳನ್ನು ನಗರ ಸಂಚಾರ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ.

ಹಲವು ಬಾರಿ ತರಹೇವಾರಿ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಬೈಕ್ ಸವಾರರು ಮಾತ್ರ ರಸ್ತೆಗೆ ಇಳಿಯುವುದನ್ನು ಬಿಟ್ಟಿಲ್ಲ. ಹೀಗಾಗಿ ಇಂತಹ ಬೈಕ್​ಗಳನ್ನು ವಶಕ್ಕೆ‌ ಪಡೆಯಲು ಸಂಚಾರ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದರು.

ಬೈಕ್ ಸವಾರರೇ ಎಚ್ಚರ !

ನಗರ ವ್ಯಾಪ್ತಿಯಲ್ಲಿ ಬರುವ 44 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 900ಕ್ಕೂ ಹೆಚ್ಚು ಬೈಕ್​​ಗಳನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಸವಾರರು ಮನೆಗೆ ನಡೆದುಕೊಂಡೇ ಹೋದರು.

ಬೈಕ್ ಸವಾರರೇ ಎಚ್ಚರ !

ಇದೇ ರೀತಿ ಲಾಕ್​ಡೌನ್ ಆದೇಶ ಉಲ್ಲಂಘನೆ ಮಾಡಿದರೆ ವಾಸ್ತವಾಂಶ ಪರಿಶೀಲಿಸಿ ಅನಗತ್ಯವಾಗಿ ಬೈಕ್ ಚಲಾಯಿಸುತ್ತಿರುವುದು ಕಂಡು ಬಂದರೆ, ಬೈಕ್ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details