ಬೆಂಗಳೂರು:ಡಿಜಿಟಲ್ ಅಗ್ರಿ ಪ್ಲಾಟ್ಫಾರ್ಮ್ ಆಗಿರುವ 'ಬಿಗ್ಹಾತ್' ಕನ್ನಡದಲ್ಲಿ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಮತ್ತು 'ಬಿಗ್ಹಾತ್' ಸಿಇಒ ಸತೀಶ ನೂಕಾಲ ಅವರು ಈ ಆ್ಯಪ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಯೋಗಿ ಕಳಸದ, ಕರ್ನಾಟಕದಲ್ಲಿ ಜನಸಂಖ್ಯಾ ಗಣತಿ 2011ರ ವರದಿಯ ಪ್ರಕಾರ ಕೃಷಿಯು 13 ದಶಲಕ್ಷಕ್ಕೂ ಹೆಚ್ಚು ರೈತರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಒಟ್ಟು 114.54 ಲಕ್ಷ ಹೆಕ್ಟೇರ್ ಭೂಮಿಯನ್ನು ಸಾಗುವಳಿ ಮಾಡಲು ಲಭ್ಯವಿದೆ. ಇದು ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇ.64.6ರಷ್ಟಾಗಿದೆ. ಕನ್ನಡದಲ್ಲಿ 'ಬಿಗ್ಹಾತ್' ಆ್ಯಪ್ ಮೂಲಕ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.