ಕರ್ನಾಟಕ

karnataka

ETV Bharat / state

ಇನ್ಸ್​ಪೆಕ್ಟರ್​​​ಗೆ ಪತ್ರದ ಮೂಲಕ ಪೇದೆ ಟಾಂಗ್​​​​​... ಪೇದೆಯನ್ನು ಅಮಾನತು ಮಾಡಿದ ಅಣ್ಣಾಮಲೈ - ಅಮಾನತು

ಜಯನಗರ ಠಾಣಾ ವ್ಯಾಪ್ತಿಯ ಐವರು ಬೀಟ್ ಪೇದೆಗಳು ನಿತ್ಯ ತಡವಾಗಿ ಕೆಲಸಕ್ಕೆ ಬರುತ್ತಿದ್ದರು. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ಜಯನಗರ ಠಾಣೆ ಇನ್ಸ್​ಪೆಕ್ಟರ್ ನೋಟಿಸ್​ ನೀಡಿದ್ದರು. ಈ ಪತ್ರಕ್ಕೆ ಬೇಜವಾಬ್ದಾರಿತನದಿಂದ ಉತ್ತರ ನೀಡಿದ್ದಕ್ಕೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಅಮಾನತು

By

Published : Apr 16, 2019, 7:37 AM IST

ಬೆಂಗಳೂರು:ಜಯನಗರ ಪೊಲೀಸ್ ಪೇದೆ ಬೇಜವಾಬ್ದಾರಿಯಿಂದ ಇನ್ಸ್​ಪೆಕ್ಟರ್​​​ಗೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ಶ್ರೀಧರ್​ನನ್ನು ನಗರ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕರ್ತವ್ಯ ಲೋಪ ಹಾಗೂ ಅಶಿಸ್ತಿನ ಕಾರಣ ಪೇದೆಯನ್ನು ಸಸ್ಪೆಂಡ್ ಮಾಡಲಾಗಿದೆ. ಜಯನಗರ ಠಾಣಾ ವ್ಯಾಪ್ತಿಯ ಐವರು ಬೀಟ್ ಪೇದೆಗಳು ನಿತ್ಯ ತಡವಾಗಿ ಕೆಲಸಕ್ಕೆ ಬರುತ್ತಿದ್ದರು. ಹೀಗಾಗಿ ಪೇದೆ ಶ್ರೀಧರ್ ಸೇರಿ 5 ಮಂದಿಗೆ ಜಯನಗರ ಠಾಣೆ ಇನ್ಸ್​ಪೆಕ್ಟರ್ ನೋಟಿಸ್​ ನೀಡಿದ್ದರು.

ಈ ನೋಟಿಸ್​ಗೆ ಪ್ರತ್ಯುತ್ತರವಾಗಿ ಪೇದೆ ಶ್ರೀಧರ್​, ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥವಾ ಯುಡಿ ಹೋಟೆಲ್​ನಲ್ಲಿ ಟಿಫನ್, ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್​​ನಲ್ಲಿ ಊಟ, ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದ್ದಿದ್ದರೆ ಬೆಳಗ್ಗೆ 8.30ಕ್ಕೆ ಅಲ್ಲ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. ಆದರೆ ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು-ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದರು.

ABOUT THE AUTHOR

...view details