ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಅರ್ಥ್ ಮೂವರ್ ಲಿಮಿಟೆಡ್‌ನಲ್ಲಿ (ಬಿಇಎಂಎಲ್) ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 119 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಂಸ್ಥೆಯ ಉತ್ಪಾದನಾ ಘಟಕ ಮತ್ತು ಮಾರ್ಕೆಟಿಂಗ್ ವಲಯಗಳಿಗೆ ನೇಮಕಾತಿ ನಡೆಯುತ್ತದೆ.
ಹುದ್ದೆಗಳ ವಿವರ:
- ಡಿಪ್ಲೋಮಾ ಟ್ರೈನಿ ಮೆಕಾನಿಕಲ್ - 52
- ಡಿಪ್ಲೋಮಾ ಟ್ರೈನಿ ಎಲೆಕ್ಟ್ರಿಕಲ್- 27
- ಡಿಪ್ಲೋಮಾ ಟ್ರೈನಿ ಸಿವಿಲ್ - 7
- ಐಟಿಐ ಟ್ರೈನಿ ಮೆಕಾನಿಸ್ಟ್ - 16
- ಐಟಿಐ ಟ್ರೈನಿ ಟ್ಯೂನರ್ - 16
- ಸ್ಟಾಫ್ ನರ್ಸ್ -1
ವಿದ್ಯಾರ್ಹತೆ:
- ಡಿಪ್ಲೋಮಾ ಟ್ರೈನಿ ಮೆಕಾನಿಕಲ್ - ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
- ಡಿಪ್ಲೋಮಾ ಟ್ರೈನಿ ಎಲೆಕ್ಟ್ರಿಕಲ್ - ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
- ಡಿಪ್ಲೋಮಾ ಟ್ರೈನಿ ಸಿವಿಲ್ - ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾ
- ಐಟಿಐ ಟ್ರೈನಿ ಮೆಕಾನಿಸ್ಟ್ - ಐಟಿಐ
- ಐಟಿಐ ಟ್ರೈನಿ ಟ್ಯೂನರ್ - ಐಟಿಐ
- ಸ್ಟಾಫ್ ನರ್ಸ್ - ಬಿಎಸ್ಸಿ ನರ್ಸಿಂಗ್ ಅಥವಾ ನರ್ಸಿಂಗ್ ಮತ್ತು ಮಿಡ್ವೈಫ್ನಲ್ಲಿ ಡಿಪ್ಲೊಮಾ