ಬೆಂಗಳೂರು: ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ್ ಸರ್ವೇಯಲ್ಲಿ ಬಿಬಿಎಂಪಿ ಉತ್ತಮ ರ್ಯಾಂಕ್ ಗಳಿಸುವ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ.
ಉತ್ತಮ ಅಂಕ ತಂದುಕೊಡುವ ಅಂಶವಾದ ‘ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್) ಎಂದು ಬೆಂಗಳೂರನ್ನು ಡಿ.15 ರ ಒಳಗಾಗಿ ಘೋಷಣೆ ಮಾಡಿಕೊಳ್ಳಬೇಕಾಗಿತ್ತು. ಆದ್ರೆ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಶೇಕಡಾ.84 ರಷ್ಟು ಪ್ರದೇಶಗಳು ಮಾತ್ರ ಬಯಲು ಬಹಿರ್ದೆಸೆ ಮುಕ್ತವಾಗಿದೆ. ಈ ಹಿನ್ನೆಲೆ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬಿಬಿಎಂಪಿಗೆ 1,500 ಅಂಕಗಳು ಕಡಿತವಾಗಲಿದೆ. ಒಡಿಎಫ್ ಪ್ರಮಾಣ ಪತ್ರಕ್ಕೆ ಶೇ.90 ಪ್ರದೇಶಗಳಲ್ಲಾದರೂ ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿರಬೇಕು. ಹೀಗಾಗಿ, ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ಇರುವ ಅವಕಾಶವನ್ನು ಬಿಬಿಎಂಪಿ ಕಳೆದುಕೊಂಡಿದೆ.