ಬೆಂಗಳೂರು: ನಗರದಲ್ಲಿ ಲಾಕ್ಡೌನ್ ಅಥವಾ ಸೀಲ್ಡೌನ್ ಬಗ್ಗೆ ನಾಗರಿಕರಿಗೆ ಯಾವುದೇ ಗೊಂದಲ ಬೇಡವೆಂದು ಬಿಬಿಎಂಪಿ ಆಯುಕ್ತರು ಟ್ವೀಟ್ ಮಾಡಿದ್ದಾರೆ.
ಸರ್ಕಾರವೇ ಅಧಿಕೃತ ಘೋಷಣೆ ಮಾಡಲಿದೆ: ಲಾಕ್ಡೌನ್ ಬಗ್ಗೆ ಪ್ಯಾನಿಕ್ ಆಗಬೇಡಿ ಎಂದ ಬಿಬಿಎಂಪಿ ಆಯುಕ್ತ - Bengaluru lock down news
ನಗರದಲ್ಲಿ ಲಾಕ್ಡೌನ್ ಅಥವಾ ಸೀಲ್ಡೌನ್ ಬಗ್ಗೆ ನಾಗರಿಕರಿಗೆ ಯಾವುದೇ ಗೊಂದಲ ಬೇಡ. ಈ ಕುರಿತು ಸರ್ಕಾರವೇ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಬಿಬಿಎಂಪಿ ಆಯುಕ್ತರ ಟ್ವೀಟ್
ಜನ ಪ್ಯಾನಿಕ್ ಆಗುವುದು ಬೇಡ. ಸರ್ಕಾರ ಎಲ್ಲಾ ಆಗುಹೋಗುಗಳನ್ನು ಗಮನಿಸುತ್ತಿದ್ದು, ಲಾಕ್ಡೌನ್, ಅಥವಾ ಸೀಲ್ಡೌನ್ ಕುರಿತು ಸರ್ಕಾರವೇ ಅಧಿಕೃತ ಘೋಷಣೆ ಮಾಡಲಿದೆ. ಅಲ್ಲಿವರೆಗೂ ಯಾವುದೇ ಸುದ್ದಿಗಳನ್ನು ನಂಬಬೇಡಿ. ಸುಳ್ಳು ಸುದ್ದಿ ಹರಡಬೇಡಿ ಎಂದು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.