ಕರ್ನಾಟಕ

karnataka

ETV Bharat / state

ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಿದ ಬಿಬಿಎಂಪಿ..

ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿರುವ ಕಾರ್ಯನಿರತ ಎಲ್ಲಾ ಖಾಯಂ ಪೌರಕಾರ್ಮಿಕರು ಹಾಗೂ ನೇರ ವೇತನ ಪೌರಕಾರ್ಮಿಕರು ಹಾಗೂ ಸಹಾಯಕರು ಸಿಹಿ ತಿಂಡಿಯನ್ನು ಖರೀದಿಸಲು 200 ರೂಪಾಯಿಯನ್ನು ಅವರ ಖಾತೆಗೆ ವರ್ಗಾಯಿಸಲಾಗಿತ್ತು. ಇನ್ನೂ‌ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 99 ಪೌರಕಾರ್ಮಿಕರ ಕಾಲೋನಿಗಳಿವೆ.

By

Published : Apr 14, 2020, 11:51 AM IST

BBMP celebrated the Dr BR Ambedkar jayanti very simple
ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಿದ ಬಿಬಿಎಂಪಿ

ಬೆಂಗಳೂರು :ಬಿಬಿಎಂಪಿ ವತಿಯಿಂದ 2020ನೇ ಸಾಲಿನ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಕೋವಿಡ್-19 ಹಿನ್ನೆಲೆ ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಕೇಂದ್ರ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.

ಬಿಬಿಎಂಪಿಯಿಂದ ಸರಳವಾಗಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ..

ಪೌರಕಾರ್ಮಿಕರಿಗೆ ಬಿಬಿಎಂಪಿ ಆಯುಕ್ತರು ಉತ್ತಮ ಗುಣಮಟ್ಟದ ಸುರಕ್ಷತಾ ಕಿಟ್ ಕೊಟ್ಟಿದ್ದಾರೆ. ಇದರಲ್ಲಿ 2 ಜೊತೆ ಮುಖಗವಸು(ಮಾಸ್ಕ್), 1 ಜೊತೆ ಕೈಗವಸು(ಗ್ಲೌಸ್), 1 ಜೊತೆ ಶೂ ಮತ್ತು ಸ್ಯಾನಿಟೈಸರ್ ಇಟ್ಟಿದ್ದರು. ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿರುವ ಕಾರ್ಯನಿರತ ಎಲ್ಲಾ ಖಾಯಂ ಪೌರಕಾರ್ಮಿಕರು ಹಾಗೂ ನೇರ ವೇತನ ಪೌರಕಾರ್ಮಿಕರು ಹಾಗೂ ಸಹಾಯಕರು ಸಿಹಿ ತಿಂಡಿಯನ್ನು ಖರೀದಿಸಲು 200 ರೂಪಾಯಿಯನ್ನು ಅವರ ಖಾತೆಗೆ ವರ್ಗಾಯಿಸಲಾಗಿತ್ತು. ಇನ್ನೂ‌ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 99 ಪೌರಕಾರ್ಮಿಕರ ಕಾಲೋನಿಗಳಿವೆ.
ಈ ಪೈಕಿ ಪಾಲಿಕೆ ಹಾಗೂ ಬೆಂಗಳೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಪಿಹೆಚ್‌ಸಿ ವೈದ್ಯಾಧಿಕಾರಿಗಳ ತಂಡವು ಎಲ್ಲಾ ಪೌರಕಾರ್ಮಿಕರ ಕಾಲೋನಿಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಈ ವೇಳೆ ಮಾತನಾಡಿದ ಮೇಯರ್ ಗೌತಮ್‌ಕುಮಾರ್, ಕೊರೊನಾ ವೈರಸ್​ ಹಿನ್ನೆಲೆ ಸುರಕ್ಷತೆಗಾಗಿ ಮೆಡಿಕಲ್ ಕ್ಯಾಂಪ್ ನಡೆಸಲಾಗುವುದು ಎಂದರು. ಇನ್ನೂ ಆಯುಕ್ತರಾದ ಬಿ ಹೆಚ್ ಅನಿಲ್‌ಕುಮಾರ್ ಮಾತನಾಡಿ, ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯ ಸುರಕ್ಷತಾ ಕಿಟ್​ಗಳನ್ನು ನೀಡಲಾಗಿದೆ‌ ಎಂದರು.

ABOUT THE AUTHOR

...view details