ಬೆಂಗಳೂರು :ಮೆಗಾ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಡ್ರಗ್ ಸಾಗಾಟ ಮಾಡುತ್ತಿದ್ದ ಬಹ್ರೇನ್ನ ಮಾಜಿ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 3.5 ಕೆಜಿ ಹ್ಯಾಶಿಷ್ ಆಯಿಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ದೇವರ ಪ್ರಸಾದದ ಹೆಸರಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದರು. ಬ್ರಹ್ಮ ರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹಂ, ಚಾಯಾ ವಧನ ಲೇಹ ಎಂಬ ಹೆಸರಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು, ಎನ್‌ಸಿಬಿ ಅಧಿಕಾರಿಗಳು ಬಹ್ರೇನ್‌ಗೆ ಸಾಗಾಟ ಮಾಡುತ್ತಿದ್ದ 3.5 ಕೆಜಿ ಹ್ಯಾಶಿಷ್ ಆಯಿಲ್ ವಶಕ್ಕೆ ಪಡೆದಿದ್ದಾರೆ.
ದೇವರ ಪ್ರಸಾದ ಹೆಸರಲ್ಲಿ ಡ್ರಗ್ಸ್ ಸಾಗಾಟ ಸೆಡೋಪೆಡ್ರಿನ್ ವಶ
ಅಲ್ಲದೆ, ಮತ್ತೊಂದು ಕಾರ್ಯಾಚರಣೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ಆಸ್ಟ್ರೇಲಿಯಾಗೆ ಸಾಗಿಸುತ್ತಿದ್ದ 19 ಕೆಜಿ ಸೆಡೋಪೆಡ್ರಿನ್ ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಕಡೆ ದಾಳಿ ನಡೆಸಿ ಆಸ್ಟ್ರೇಲಿಯಾಗೆ ರವಾನಿಸುತ್ತಿದ್ದ 4 ಕೆಜಿ ಸೆಡೋಪೆಡ್ರಿನ್ ಸೀಜ್ ಮಾಡಿದ್ದಾರೆ.
ಕೇರಳದಲ್ಲಿ ಹ್ಯಾಶಿಷ್ ಆಯಿಲ್ ಸೀಜ್ :ಇದರ ಜತೆಗೆ ಕೇರಳಾದ ಎರ್ನಾಕುಲಂನಲ್ಲಿ 3.5 ಕೆಜಿ ಹ್ಯಾಶಿಷ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ಕೇರಳಾಗೆ ಸಾಗಾಟದ ಬಗ್ಗೆ ಮೊದಲೇ ಎನ್‌ಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು.
ಮೆಗಾ ಕಾರ್ಯಾಚರಣೆ
ಸೆ.29ರಂದು ಬೆಂಗಳೂರು ಮೂಲದ ಆರೋಪಿಯನ್ನು ಕಾಸರಗೋಡಿನಲ್ಲಿ ಅರೆಸ್ಟ್ ಮಾಡಲಾಗಿತ್ತು. ಬಂಧಿತನು ಆಸ್ಟ್ರೇಲಿಯಾಗೆ ಡ್ರಗ್ ಸಾಗಾಟ ಮಾಡುತ್ತಿದ್ದ. ಈ ಕಾರ್ಯಾಚರಣೆ ವೇಳೆ ಚೆನ್ನೈ ಹಾಗೂ ಎರ್ನಾಕುಲಂ ಏರ್ಪೋರ್ಟ್‌ನಲ್ಲಿ ಡ್ರಗ್ಸ್ ಸೀಜ್ ಮಾಡಲಾಗಿದೆ. ಆರೋಪಿಗಳು ಕರೈಕಾಲ್ ಎಂಬ ಕೋರಿಯರ್ ಕಂಪನಿ ಮೂಲಕ ಡ್ರಗ್ಸ್ ಕೋರಿಯರ್ ಮಾಡುತ್ತಿದ್ದರು. ಎನ್‌ಸಿಬಿ ಅಧಿಕಾರಿಗಳು ಕಾರ್ಯಾಚರಣೆಯಿಂದಾಗಿ ಒಂದು ವಾರದಲ್ಲಿ ಮೂರು ಕಡೆ ದಾಳಿ ನಡೆಸಿ ಬೃಹತ್ ಡ್ರಗ್ ಜಾಲವನ್ನೇ ಭೇದಿದ್ದಾರೆ.