ಬೆಂಗಳೂರು : ನಗರದ ಪಶ್ಚಿಮ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಖಾಕಿಯಿಂದ ರೌಡಿ ಶೀಟರ್ಗಳ ಮೇಲೆ ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗ್ ಬ್ಯಾಟರಾಯನಪುರ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಚಾಮರಾಜಪೇಟೆಯ ಅನಂತಪುರ್, ಟಿಪ್ಪುನಗರ,ಆಜಾತನಗರ, ವಾಲ್ಮೀಕಿನಗರ ಹಾಗೂ ಬ್ಯಾಟರಾಯನಪುರ ಠಾಣೆಯ ಕೆಬಿನಗರ, ಪಾದರಾಯನಪುರ, ಶ್ಯಾಮಣ್ಣಗಾರ್ಡನ್,ಹೊಸಗುಡ್ಡದಹಳ್ಳಿಯ ಸುಮಾರು 63 ರೌಡಿಗಳ ಮನೆ ಮೇಲೆ ಏಕಾಕಾಲದಲ್ಲಿ ದಾಳಿ ನೆಡೆಸಿದ್ದಾರೆ. ಈ ಮೂಲಕ ರೌಡಿಗಳ ಚಲನವಲನಗಳ ಮೇಲೆ ನಿಗಾ ಮತ್ತು ಎಚ್ಚರಿಕೆ ನೀಡಲು ದಾಳಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಖಾಕಿಯಿಂದ ರೌಡಿಶೀಟರ್ಗಳ ಮೇಲೆ ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗ್ ಬೆಳ್ಳಂಬೆಳಗ್ಗೆ ರೌಡಿಗಳ ಮೇಲೆ ಮುಗಿಬಿದ್ದ ನಗರ ಪೊಲೀಸರು : 18 ಜನ ಖಾಕಿ ವಶಕ್ಕೆ
ರೌಡಿ ಆಸಾಮಿಗಳ ಮನೆಗಳ ಮೇಲೆ ನಗರ ಪೊಲೀಸರು ದಾಳಿ ನೆಡೆಸಿದ್ದರು. ಆಗ್ನೇಯ ವಿಭಾಗದ ಪೊಲೀಸರಿಂದ ಇಂದು ಬೆಳ್ಳಂಬೆಳಗ್ಗೆ ರೇಡ್ ನಡೆದಿತ್ತು. ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿತ್ತು.
ಕುಖ್ಯಾತ ರೌಡಿ ಆಸಾಮಿಗಳಾದ ಸುಜೀತ್, ತೇಜಸ್, ಕಿಶೋರ್, ಸುರೇಶ್, ಅತಾವುಲ್ಲಾ, ಆನಂದ್, ಗೌತಮ್, ಮಣಿಕಾಂತ್, ಆನಂದ್ ಅಲಿಯಾಸ್ ಬ್ರಿಡ್ಜ್, ಶಿವ ಅಲಿಯಾಸ್ ಹಂದಿ ಶಿವ, ಅಂಬರೀಶ್, ಗೆಜ್ಜೆ ವೆಂಕಟೇಶ್ ಸೇರಿದಂತೆ 63 ಜನರ ಮನೆಗಳ ಮೇಲೆ ರೇಡ್ ನೆಡೆದಿತ್ತು.
ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರಿಂದ ದಾಳಿ, ಹಲವರು ವಶಕ್ಕೆ
ಈವರೆಗೆ ಒಟ್ಟು 18 ಜನರನ್ನು ವಶಕ್ಕೆ ಪಡೆದಿದ್ದ ನಗರ ಪೊಲೀಸರು,ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ದಾಳಿ ಮುಂದುವರೆಸಿದ್ದರು.