ಕರ್ನಾಟಕ

karnataka

ETV Bharat / state

ವಿಧಾನ ಪರಿಷತ್​ ಸದಸ್ಯರಾಗಿ ಬಾಬುರಾವ್ ಚಿಂಚನಸೂರ್ ಪ್ರಮಾಣವಚನ ಸ್ವೀಕಾರ - ಸಹಾಯಕ ಚುನಾವಣಾಧಿಕಾರಿ

ವಿಧಾನಪರಿಷತ್​ ಸದಸ್ಯರಾಗಿ ಬಾಬುರಾವ್​ ಚಿಂಚನಸೂರ್​ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ವಿಧಾನಸೌಧದ ಸಭಾಪತಿ ಕೊಠಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

KN_BNG_02_Baburao_Chinchansur_taking_oath_Script1_7208083
ಬಾಬುರಾವ್ ಚಿಂಚನಸೂರ್ ಪ್ರಮಾಣವಚನ ಸ್ವೀಕಾರ

By

Published : Aug 5, 2022, 10:42 PM IST

ಬೆಂಗಳೂರು: ವಿಧಾನಪರಿಷತ್​ಗೆ ಅವಿರೋಧವಾಗಿ ಆಯ್ಕೆಯಾದ ಬಾಬುರಾವ್ ಚಿಂಚನಸೂರ್ ವಿಧಾನಸೌಧದ ಸಭಾಪತಿ ಕೊಠಡಿಯಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನಪರಿಷತ್ತಿನ ಸದಸ್ಯರಾಗಿದ್ದ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಚುನಾವಣೆ ನಡೆದಿತ್ತು.

ಬಾಬುರಾವ್ ಚಿಂಚನಸೂರ್ ಮಾತನಾಡಿ, "ಹೈದರಾಬಾದ್ ಕರ್ನಾಟಕದಲ್ಲಿ ಶೇ. 40 ರಷ್ಟು ಕೋಲಿ ಸಮಾಜ ಇದೆ. ಇದು ಕೋಲಿ ಸಮಾಜ ಅತಿ ಹೆಚ್ಚು ಜನರನ್ನು ಹೊಂದಿರುವ ಭಾಗ. ಆ ಭಾಗಕ್ಕೆ ಪ್ರಾತಿನಿಧ್ಯ ಕೊಡಬೇಕು. ನನ್ನನ್ನು ಗುರುತಿಸಿ ಅಭ್ಯರ್ಥಿ ಮಾಡಿರುವ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಅಮಿತ್ ಶಾ, ನಡ್ಡಾ, ಭಗವಂತ್ ಖೂಬಾ, ಉಮೇಶ್ ಜಾದವ್ ಎಲ್ಲರಿಗೂ ಅಭಿನಂದನೆಗಳು" ಎಂದು ಹೇಳಿದರು.

ಬಾಬುರಾವ್ ಚಿಂಚನಸೂರ್ ಪ್ರಮಾಣವಚನ ಸ್ವೀಕಾರ

"ಹೈದರಾಬಾದ್-ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಪ್ರಬಲ ಶಕ್ತಿ ಹೊಂದಿದೆ. ಮುಂದಿನ ದಿನಗಳಲ್ಲಿ ಪ್ರಚಂಡ ಶಕ್ತಿಯೊಂದಿಗೆ ಬಿಜೆಪಿ ಜಯಭೇರಿ ಭಾರಿಸಲಿದೆ. ನಾನು ಬಿಜೆಪಿ ಮುಖಂಡನಾದ ಬಳಿಕ ಎಲ್ಲರೂ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಎಲ್ಲಾ ಕಡೆಯಿಂದ ಬರುತ್ತಿರುವ ಕೋಲಿ ಸಮುದಾಯ ಬಿಜೆಪಿ ಸೇರಲಿದ್ದಾರೆ" ಎಂದರು.

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಮುಗಿಯದ ರಾಜ್ಯ ಸಂಪುಟ ಸರ್ಕಸ್: ಮತ್ತೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

ABOUT THE AUTHOR

...view details